ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ನಿನ್ನೆಯಷ್ಟೇ ಭೂಮಿಪೂಜೆಯಾಗಿ ನಿರ್ಮಾಣ ಕಾರ್ಯ ಆರಂಭವಾಗಬೇಕಿರುವ ರಾಮ ಮಂದಿರವನ್ನು ಕೆಡವಿ ಮತ್ತೆ ಅದೇ ಜಾಗದಲ್ಲಿ ಮಸೀದಿ ಕಟ್ಟುತ್ತೇವೆ ಎಂದು ಅಖಿಲ ಭಾರತ ಇಮಾಮ್ ಸಂಘದ ಅಧ್ಯಕ್ಷ ಹೇಳಿದ್ದಾರೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ಬಾಬ್ರಿ ಮಸೀದಿ ಅಲ್ಲಿ ಹಿಂದೆಯೂ ಇತ್ತು. ಮುಂದೆಯೂ ಇರಲಿದೆ. ಯಾವು ತೀರ್ಪು ಇಲ್ಲಿ ಲೆಕ್ಕಕ್ಕಿಲ್ಲ ಎಂದು ನಿನ್ನೆ ಅಖಿಲ ಭಾರತ ಮುಸ್ಲಿಂ ಸಂಘಟನೆಯ ಅಧ್ಯಕ್ಷ ಟ್ವೀಟ್ ಮಾಡಿತ್ತು. ಇದೀಗ ಇದರ ಬೆನ್ನಲ್ಲೇ ಅಖಿಲ ಭಾರತ ಇಮಾಮ್ ಸಂಘದ ಅಧ್ಯಕ್ಷ ಪ್ರಚೋದನಾಕಾರಿ ಹೇಳಿಕೆ ನೀಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ರಾಮಮಂದಿರವನ್ನು ಕೆಡವಿ ಮತ್ತೆ ಅಲ್ಲಿ ಮಸೀದಿ ನಿರ್ಮಿಸುತ್ತೇವೆ. ಮಸೀದಿ ಎಂದಿಗೂ ಮಸೀದಿಯಾಗಿಯೇ ಇರಬೇಕು ಎಂದು ಇಸ್ಲಾಂ ಧರ್ಮ ಹೇಳುತ್ತದೆ. ಮಸೀದಿ ಜಾಗದಲ್ಲಿ ಬೇರೆ ಏನನ್ನೇ ನಿರ್ಮಿಸಲು ನಮ್ಮ ಧರ್ಮ ಬಿಡುವುದಿಲ್ಲ ಎಂದು ಸಾಜಿದ್ ರಶೀದ್ ಟ್ವೀಟ್ ಮಾಡಿರುವುದಾಗಿ ವರದಿ ಹೇಳಿದೆ.
Islam says a mosque will always be a mosque. It can’t be broken to build something else. We believe it was, and always will be a mosque. Mosque wasn’t built after demolishing temple but now maybe temple will be demolished to build mosque: Sajid Rashidi, Pres, All India Imam Assn pic.twitter.com/DzlbYQ3qdm
— ANI (@ANI) August 6, 2020
ರಾಮಮಂದಿರ ಶಿಲಾನ್ಯಾಸದಲ್ಲಿ ಭಾಗಿಯಾಗುವ ಮೂಲಕ ಪ್ರಧಾನಿ ಮೋದಿ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ. ಬಾಬ್ರಿ ಮಸೀದಿಯನ್ನು ನಿರ್ಮಿಸುವಾಗ ಅಲ್ಲಿ ಯಾವುದೇ ದೇವಾಲಯವನ್ನು ಕೆಡವಿರಲಿಲ್ಲ. ಆದರೆ, ಈಗ ಮಸೀದಿ ಕಟ್ಟಲು ರಾಮಮಂದಿರವನ್ನು ಕೆಡವುತ್ತೇವೆ ಎಂದಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post