ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ರಾಮಾ ರಾಮಾ ರೇ ಚಲನಚಿತ್ರವನ್ನು ಒಂದು ತಿಂಗಳ ಹಿಂದೆ ಲಾಕ್ ಡೌನ್ ಪ್ರಯುಕ್ತ ಸತ್ಯ ಪಿಕ್ಚರ್ಸ್ ಯೂ ಟ್ಯೂಬ್ ಚಾನಲ್ ನಲ್ಲಿ ಪ್ರದರ್ಶನಕ್ಕೆ ಬಿಡಲಾಗಿತ್ತು.
ಒಂದು ತಿಂಗಳಿನಲ್ಲೇ 10 ಲಕ್ಷಕ್ಕೂ ಮೀರಿ ಅಂದರೆ 1 ಮಿಲಿಯನ್ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿದ್ದಾರೆ.
ಈಗ ಮರಾಠಿ ನಿರ್ಮಾಣ ಸಂಸ್ಥೆಯೊಂದು ರಾಮಾ ರಾಮಾ ರೇ ಚಿತ್ರವನ್ನು ಮರಾಠಿ ಭಾಷೆಯಲ್ಲಿ ರಿಮೇಕ್ ಮಾಡಲು ಮುಂದೆ ಬಂದಿದ್ದು, ಸತ್ಯ ಪಿಕ್ಚರ್ಸ್ ಸಹಯೋಗದೊಂದಿಗೆ ಚಿತ್ರ ನಿರ್ಮಾಣ ಕಾರ್ಯವು ಪ್ರಾರಂಭವಾಗಲಿದೆ. ಲಾಕ್ ಡೌನ್ ಮುಗಿದ ನಂತರ ಮುಂದಿನ ಕೆಲಸಗಳು ಶುರುವಾಗಲಿದೆ.
Get in Touch With Us info@kalpa.news Whatsapp: 9481252093
















