ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೈಂದೂರು: ಕ್ವಾರಂಟೈನ್’ಲಿ ಇರುವವರಿಗೆ ಅಗತ್ಯವಾಗಿರುವ ಎಲ್ಲ ರೀತಿಯ ಸೂಕ್ತ ವ್ಯವಸ್ಥೆ ಮಾಡಿಕೊಂಡುವಂತೆ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಸೂಚಿಸಿದರು.
ಶಿರೂರು ಟೋಲ್’ಗೇಟ್’ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿದರು.
ಹೊರರಾಜ್ಯದಿಂದ ಬಂದವರನ್ನು ಕೂಡಲೇ ಆಯಾಯ ತಾಲೂಕಿಗೆ ಕಳುಹಿಸುವಂತೆ ಹಾಗೂ ಕ್ವಾರಂಟೈನ್ ಅಲ್ಲಿದ್ದವರಿಗೆ ಅಗತ್ಯ ವಾಹನ ವ್ಯವಸ್ಥೆ ಮಾಡಿ ಸರಿಯಾದ ವೇಳೆಯಲ್ಲಿ ಊಟ ತಿಂಡಿ ವಿತರಿಸಬೇಕು ಎಂದರು.
ನಂತರ ಕೆಲವು ಕ್ವಾರಂಟೈನ್ ವಸತಿ ನಿಲಯಕ್ಕೆ ತೆರಳಿದ ಶಾಸಕರು, ಕುಡಿಯುವ ನೀರು, ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಸ್ಥಳದಲ್ಲಿಯ ನೋಂದಣಿ, ತಪಾಸಣೆ ಜಾಗಕ್ಕೆ ಭೇಟಿ ನೀಡಿದರು. ಹೊರ ರಾಜ್ಯದವರಿಂದ ಆಗಮಿಸುವವರಿಗೆ ಕುಡಿಯುವ ನೀರು ಹಾಗೂ ಬಿಸ್ಕತ್ ಗಳಿಗೆ ದಾನಿಗಳಿಂದ ತಾಲೂಕು ಆರೋಗ್ಯ ಅಧಿಕಾರಿ ಅವರಿಗೆ ಹಣವನ್ನು ಹಸ್ತಾಂತರಿಸಿದರು.
Get in Touch With Us info@kalpa.news Whatsapp: 9481252093
Discussion about this post