ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮಕೃಷ್ಣ ಶೆಣೈ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಶ್ರೀಯುತರು, 2012 ರಲ್ಲಿ ಪ್ರತಿಷ್ಠಿತವಾದ ಶ್ರೀ ಲಕ್ಷ್ಮೀ ವೆಂಕಟರಮಣ ದೇವ ಮಂದಿರದ ನಿರ್ಮಾಣದ ಪ್ರಮುಖ ರೂವಾರಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು.
ಗೌಡ ಸಾರಸ್ವತ ಸಮಾಜದ ಗೌರವಕ್ಕೆ ಪಾತ್ರರಾಗಿದ್ದ ವ್ಯಕ್ತಿಯಾಗಿ, ಜೀವಮಾನವಿಡಿ ಸಮಾಜಕ್ಕಾಗಿ ಶ್ರಮಿಸಿದ್ದರು.
ನಗರದ ವಿಜಯ ಟ್ರಾವೆಲ್ಸ್ ಮಾಲೀಕರು ಆಗಿದ್ದ ಇವರು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅಪಾರ ಬಂಧುಮಿತ್ರರನ್ನು ಹೊಂದಿದ್ದ ಇವರ ನಿಧನ ಗೌಡ ಸಾರಸ್ವತ ಸಮಾಜಕ್ಕೆ ತುಂಬಲಾರದ ಆಘಾತವನ್ನು ಉಂಟುಮಾಡಿದೆ.
ದಿವಂಗತರ ನಿಧನಕ್ಕೆ ಶಿವಮೊಗ್ಗ ನಗರದ ಗೌಡ ಸಾರಸ್ವತ ಸಮಾಜದ ಪ್ರಮುಖರು, ಹಾಗೂ ಸಮಾಜ ಬಾಂಧವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Get in Touch With Us info@kalpa.news Whatsapp: 9481252093

















