ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂದು ನಗರದ ಎರಡು ಭಾಗಗಳನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಸುದ್ದಿ ಹರಿದಾಡುತ್ತಿದೆ.
ನಗರದ ರಾಮಕೃಷ್ಣಾಶ್ರಮ ಸ್ವಾಮೀಜಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಹೇಳಲಾಗಿದ್ದು, ಈ ಕಾರಣಕ್ಕಾಗಿ ಆಶ್ರಮ ಹಾಗೂ ಇಡಿಯ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಜಿಲ್ಲಾಧಿಕಾರಿಗಳು ಈ ಕುರಿತಂತೆ ಅಧಿಕೃತ ಆದೇಶ ಹೊರಡಿಸಿಲ್ಲ.
ಇನ್ನು, ವಂದನಾ ಟಾಕೀಸ್ ಪ್ರದೇಶದಲ್ಲಿ ಒಂದು ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದ್ದು, ಈ ಭಾಗವನ್ನು ಸೀಲ್ ಡೌನ್ ಮಾಡಲಾಗಿದೆ. ಅಲ್ಲದೇ, ಈ ಪ್ರದೇಶದಲ್ಲಿ ಸ್ಯಾನಿಟೈಸೇಶನ್ ಮಾಡಲಾಗಿದೆ. ಆದರೆ, ಈ ಕುರಿತಂತೆಯೂ ಸಹ ಜಿಲ್ಲಾಧಿಕಾರಿಗಳು ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ.
ಇನ್ನು, ಜೂನ್ 8 ರಂದು ಮಹಾರಾಷ್ಟ್ರದಿಂದ ಶಿವಮೊಗ್ಗಕ್ಕೆ ಬಂದಿದ್ದ 12 ಜನರಲ್ಲಿ ಇಂದು 10 ಪಾಸಿಟಿವ್ ಕೇಸುಗಳು ಪತ್ತೆಯಾಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.
ಹೊನ್ನಾಳಿ ರಸ್ತೆಯ ನಿವಾಸಿಗಳಾಗಿರುವ ಐವರು, ಮಹಾರಾಷ್ಟ್ರದಿಂದ ಶಿವಮೊಗ್ಗಕ್ಕೆ ವಾಪಾಸ್ಸಾಗಿದ್ದರು. ಇವರಲ್ಲಿ ಶಿವಮೊಗ್ಗದ ಒಂದೇ ಕುಟುಂಬದ ಐವರಿಗೆ ಸೋಂಕು ದೃಢವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಹಾಗೆಯೇ, ಇಬ್ಬರು ತೀರ್ಥಹಳ್ಳಿಯ ನಿವಾಸಿಗಳಿಗೂ ಪಾಸಿಟಿವ್ ಶಂಕೆಯಿದ್ದು, ಶಿವಮೊಗ್ಗದ ಓರ್ವ ಸ್ವಾಮೀಜಿಗೂ ಸೋಂಕು ದೃಢ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇವರು ಕೂಡ ಜೂನ್ 8ರಂದೇ ಮಹಾರಾಷ್ಟ್ರದಿಂದ ವಾಪಸ್ ಶಿವಮೊಗ್ಗಕ್ಕೆ ಬಂದಿದ್ದರು.
ಖಾಯಿಲೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲಾಗಿದ್ದ ರೋಗಿಗೂ ಕೊರೋನಾ ಸೋಂಕು ಶಂಕೆಯಿದ್ದು, ರೋಗಿಗೆ ಚಿಕಿತ್ಸೆ ನೀಡಿದ್ದವರೆಲ್ಲರೂ, ಕ್ವಾರಂಟೈನ್ ಸಾಧ್ಯತೆ ಎಂದು ಮಾಹಿತಿ ತಿಳಿದುಬಂದಿದ್ದು, ಆರೋಗ್ಯ ಇಲಾಖೆಯ ಬುಲೆಟಿನ್ ಅಥವಾ ಜಿಲ್ಲಾಧಿಕಾರಿಗಳು ಅಧಿಕೃತವಾಗಿ ಮಾಹಿತಿ ನೀಡಿದ ನಂತರವಷ್ಟೇ ಎಲ್ಲ ವಿಚಾರಗಳ ಸ್ಪಷ್ಟಗೊಳ್ಳಬೇಕಿದೆ.
Get In Touch With Us info@kalpa.news Whatsapp: 9481252093
Discussion about this post