ಕಲ್ಪ ಮೀಡಿಯಾ ಹೌಸ್ | ರಾಮನಗರ |
ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ D K Suresh ಅವರು ಇಂದು ರಾಮನಗರ ಡಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಒಟ್ಟು 593 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.
ಕಳೆದ 5 ವರ್ಷಗಳಲ್ಲಿ ಡಿ.ಕೆ. ಸುರೇಶ್ ಅವರ ಆಸ್ತಿಯಲ್ಲಿ ಸುಮಾರು 259.19 (75%) ಕೋಟಿ ರೂ.ನಷ್ಟು ಏರಿಕೆ ಕಂಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ 338 ಕೋಟಿ ರೂ. ಆಸ್ತಿ ಘೋಷಿಸಿದ್ದ ಡಿಕೆ ಸುರೇಶ್, ಈ ಬಾರಿ ಒಟ್ಟು 106.71 ಕೋಟಿ ರೂ. ಚರಾಸ್ತಿ, ಒಟ್ಟು 486.33 ಕೋಟಿ ರೂ. ಸ್ಥಿರಾಸ್ತಿ ಘೋಷಿಸಿದ್ದಾರೆ.
ತನ್ನ ಬಳಿ ಒಟ್ಟು 21,35,500 ರೂ. ಮೌಲ್ಯದ 1260 ಗ್ರಾಂ ಚಿನ್ನ ಮತ್ತು 2,10,000 ರೂ. ಮೌಲ್ಯದ 4886 ಗ್ರಾಂ ಬೆಳ್ಳಿ ಹೊಂದಿರುವುದಾಗಿ ಹೇಳಿದ್ದಾರೆ.
Also read: ಶರಾವತಿ, ವಿಐಎಸ್’ಎಲ್, ಎಂಪಿಎಂ ವಿಚಾರದಲ್ಲಿ ಕಾಂಗ್ರೆಸ್’ಗೆ ಚಾಟಿ ಬೀಸಿದ ಎಂಪಿ ರಾಘವೇಂದ್ರ
ಒಟ್ಟು 32,75,50,472 ರೂ. ಮೌಲ್ಯದ ಕೃಷಿ ಭೂಮಿ, 210,47,68,159 ರೂ. ಮೌಲ್ಯದ ಕೃಷಿಯೆತರ ಭೂಮಿ ಹೊಂದಿದ್ದಾರೆ. ಒಟ್ಟು 211,91,41,888 ರೂ. ಮೌಲ್ಯದ ವಾಣಿಜ್ಯ ಕಟ್ಟಡಗಳನ್ನು ಡಿಕೆ ಸುರೇಶ್ ಹೊಂದಿದ್ದಾರೆ.
50.06 ಕೋಟಿ ರೂ. ಸಾಲ ಇರುವುದಾಗಿಯೂ ತಿಳಿಸಿರುವ ಡಿ.ಕೆ. ಸುರೇಶ್, 7.27 ಕೋಟಿ ರೂ. ಮೊತ್ತದ ಸಾಲಕ್ಕೆ ಸಂಬಂಧಿಸಿದಂತೆ ವಿವಾದವೂ ಜಾರಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post