ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚನ್ನಪಟ್ಟಣ: ಕೊರೋನಾ ವೈರಸ್ ಹಾಗೂ ಲಾಕ್’ಡೌನ್’ನಿಂದ ತತ್ತರಿಸಿರುವ ತಾಲೂಕಿನ 150 ಬಡ ಕುಟುಂಬಗಳಿಗೆ ನವ್ಯ ಫೌಂಡೇಶನ್ ಹಾಗೂ ಮುಕುಲ್ ಮಾಧವ್ ಫೌಂಡೇಶನ್ ಫಿನೋಲೆಕ್ಸ್ ಪೈಪ್ಸ್ ವತಿಯಿಂದ ಫುಡ್ ಕಿಟ್ ವಿತರಿಸಲಾಯಿತು.
ನಗರದಲ್ಲಿ ನಡೆದ ಕಾರ್ಯಕ್ರಮವನ್ನು ತಹಶೀಲ್ದಾರ್ ನಾಗೇಶ್ ಅವರು ಉದ್ಘಾಟಿಸಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಿಸಾನ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ, ನವ್ಯ ಫೌಂಡೇಶನ್ ಅಧ್ಯಕ್ಷೆ ಆರ್. ನವ್ಯಶ್ರೀ, ಕೊರೋನಾ ವೈರಸ್ ಹಾಗೂ ಲಾಕ್’ಡೌನ್’ನಿಂದಾಗಿ ಎಲ್ಲ ವರ್ಗದ ಮಂದಿ ತತ್ತರಿಸಿದ್ದಾರೆ. ಅದರಲ್ಲೂ ಬಡ ವರ್ಗದ ಜನರು ಹಾಗೂ ಕೂಲಿ ಕಾರ್ಮಿಕರ ಜೀವನ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಅವರುಗಳು ಎಲ್ಲರಂತೆ ಸಂತಸದಿಂದ ದೀಪಾವಳಿ ಆಚರಿಸುವಂತಾಗಬೇಕು ಎಂಬುದು ನಮ್ಮ ಉದ್ದೇಶ. ಹೀಗಾಗಿ, ತಾಲೂಕಿನ ಬಿಪಿಎಲ್ ಕಾರ್ಡ್ ಹೊಂದಿರುವ 150 ಬಡ ಕುಟುಂಬಳಿಗೆ ಫುಡ್ ಕಿಟ್ ವಿತರಣೆ ಮಾಡುತ್ತಿದ್ದೇವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post