ಕಲ್ಪ ಮೀಡಿಯಾ ಹೌಸ್ | ರಾಯಚೂರು |
ಇಲ್ಲಿನ ಮಸ್ಕಿ ಬಳಿಯ ಸಂತೆ ಕೆಲ್ಲೂರಿನ ಪುಟ್ಟ ಬಾಲಕನೊಬ್ಬ ತರಗತಿಯಲ್ಲೇ ಸಮವಸ್ತ್ರದಲ್ಲಿ ಮಲ ಮಾಡಿಕೊಂಡ ಎಂಬ ಕಾರಣಕ್ಕೆ ಶಿಕ್ಷಕನೊಬ್ಬ ಆತನ ಮೇಲೆ ಬಿಸಿನೀರು ಸುರಿದ ಕುರತಾಗಿ ವರದಿಯಾಗಿದೆ.
2ನೆಯ ತರಗತಿ ಓದುತ್ತಿರುವ ಪುಟ್ಟ ಬಾಲಕ ತರಗತಿಯಲ್ಲೇ ಸಮವಸ್ತ್ರದಲ್ಲಿ ಮಲ ಮಾಡಿಕೊಂಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಶಿಕ್ಷಕನೊಬ್ಬ ಬಾಲಕನ ಮೇಲೆ ಬಿಸಿನೀರು ಸುರಿದಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕನಿಗೆ ಶೇ.40ರಷ್ಟು ಸುಟ್ಟ ಗಾಯಗಳಾಗಿದ್ದು, ಆತನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಾಲಕನ ಈ ಪರಿಸ್ಥಿತಿಗೆ ತರಗತಿಯ ಶಿಕ್ಷಕನೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ, ಈ ಕುರಿತಂತೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಶಾಲೆಯವರು ಬಾಲಕ ತರಗತಿಯಲ್ಲಿ ಮಲ ಮಾಡಿಕೊಂಡಿದ್ದ. ಸ್ವಚ್ಛ ಮಾಡಿಕೊಂಡು ಬರಲು ಆಯಾ ಜೊತೆಯಲ್ಲಿ ಹೋಗಲು ತಿಳಿಸಲಾಯಿತು. ಆದರೆ, ಬಾಲಕ ಒಬ್ಬನೇ ಹೋಗಿ ಇನ್ನೊಂದು ಕಟ್ಟಡದಲ್ಲಿ ಬಿಸಿನೀರಿನ ನಿಲ್ಲಿಯ ಕೆಳಗೆ ಕುಳಿತಿದ್ದರಿಂದ ಆತನಿಗೆ ಸುಟ್ಟಿದೆ. ಇದಕ್ಕೆ ಆಯಾ ಅವರ ನಿರ್ಲಕ್ಷ ಕಾರಣವಾಗಿದೆ. ಹೀಗಾಗಿ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post