No Result
View All Result
mysuru rss journey exhibition showcasing its history
English Articles

A Century of RSS Through a Unique Exhibition

by kalpa News
September 17, 2026
0

Kalpa Media House  |  Mysuru | A century of service. A hundred years of organisation, sacrifice and social work And...

Read moreDetails
Mysuru say no to drugs walkathon dcp harsha students

BEDA BRO Should Be Everyone’s Goal : Mysuru DCP Priyamvada calls for Drug-Free Society

September 17, 2026
Sparsh Hospital Sarjapur Bengaluru 1st Anniversary

SPARSH Hospital Sarjapur Celebrates 1st Anniversary, Expands Advanced Healthcare Access

September 16, 2026
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
  • Advertise With Us
  • Grievances
  • About Us
  • Contact Us
Thursday, September 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಬಿಜೆಪಿ – ಜೆಡಿಎಸ್ ಮುಖಂಡರಿಗೆ ವಿವಾದಗಳೇ ಮುಖ್ಯ: ಆಯನೂರು ಮಂಜುನಾಥ್ ವಾಗ್ಧಾಳಿ

kalpa News by kalpa News
August 30, 2025
in ಶಿವಮೊಗ್ಗ
0
ಬಿಜೆಪಿ – ಜೆಡಿಎಸ್ ಮುಖಂಡರಿಗೆ ವಿವಾದಗಳೇ ಮುಖ್ಯ: ಆಯನೂರು ಮಂಜುನಾಥ್ ವಾಗ್ಧಾಳಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ಬಿಜೆಪಿ ಮತ್ತು ಜೆಡಿಎಸ್ ಮುಖಂಡರುಗಳು ಅಪ್ರಬುದ್ಧರಾಗಿದ್ದು ರಾಜಕಾರಣದ ಹೆಜ್ಜೆಗಳನ್ನು ಇಡುತ್ತಿದ್ದಾರೆಯೇ ಹೊರತು, ಧರ್ಮದ ಹೆಜ್ಜೆಗಳಲ್ಲ ಜನರ ಆಶಯಗಳ ಕಡೆಗೆ ಅವರ ಗಮನವಿಲ್ಲ ವಿವಾದಗಳೇ ಇವರಿಗೆ ಮುಖ್ಯ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ವಾಗ್ಧಾಳಿ ನಡೆಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಡೀ ರಾಜ್ಯದಲ್ಲಿ ಅತಿವೃಷ್ಠಿಯಾಗುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಸಮಸ್ಯೆಗಳು ಬೇಕಾದಷ್ಟಿವೆ. ಆದರೆ ಇವೆಲ್ಲವನ್ನು ಬಿಟ್ಟು ವಿರೋಧ ಪಕ್ಷಗಳು ತಮ್ಮ ಸ್ಥಾನವನ್ನು ಮತ್ತು ವಿವೇಕವನ್ನು ಮರೆತು ಬೇಜವಾಬ್ದಾರಿಯಿಂದ ವರ್ತಿಸಿ ಸದನವನ್ನೇ ವ್ಯರ್ಥಗೊಳಿಸಿದರು. ಬಜೆಟ್ ಮಂಡನೆಯ ಸಂದರ್ಭದಲ್ಲೂ ವಿರೋಧ ಪಕ್ಷವಾಗಿ ಜನರ ಸಮಸ್ಯೆಗಳತ್ತ ಗಮನ ಸೆಳೆಯಲಿಲ್ಲ. ಬೇಡದ ಹನಿಟ್ರಾö್ಯಪ್ ವಿಚಾರ ಮಾತನಾಡಿ, ಹಲವು ಬಿಜೆಪಿ ಶಾಸಕರು ಸಸ್ಪೆಂಡ್ ಕೂಡ ಆದರು. ಬಿಜೆಪಿ ಮತ್ತು ಜೆಡಿಎಸ್ ಶಾಸಕರುಗಳಲ್ಲಿ ಪ್ರಬುದ್ಧತೆಯೇ ಇಲ್ಲ. ಇದ್ದವರು ಕೂಡ ಎಳಸಿನಂತೆ ಮಾತನಾಡುತ್ತಾರೆ. ನಾಯಕತ್ವದ ಪರಿಕಲ್ಪನೆಯೇ ಇಲ್ಲ ಅವರ ನಡೆ ಜನರ ಕಡೆ ಆಗಬೇಕು, ರೈತರ ಕಡೆ ಆಗಬೇಕು ಆದರೆ ಅವರ ಪಾದಯಾತ್ರೆಗಳು ಬೇರೆ ಬೇರೆ ದಿಕ್ಕಿನತ್ತ ಸಾಗುತ್ತಿವೆ ಎಂದರು.
ಧರ್ಮಸ್ಥಳಕ್ಕೆ #Dharmasthala ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಪಾದಯಾತ್ರೆ ಮಾಡುತ್ತಾರಂತೆ. ಇವರ ಈ ಹೆಜ್ಜೆಗಳು ರಾಜಕಾರಣದ ಹೆಜ್ಜೆಗಳೇ ಹೊರತು, ಧರ್ಮದ ಹೆಜ್ಜೆಗಳಲ್ಲ. ಈ ಹಿಂದೆ ಇವರು ಹಾಸನಕ್ಕೆ ಏಕೆ ಪಾದಯಾತ್ರೆ ಮಾಡಲಿಲ್ಲ. ಹಾಸನದಲ್ಲಿ ಇವರದೇ ಪಕ್ಷದ ಮುಖಂಡನೊಬ್ಬನ ಅತ್ಯಾಚಾರಗಳು, ಅನಾಚಾರಗಳು ನಡೆದವು. ನ್ಯಾಯಾಲಯ ಶಿಕ್ಷೆಕೊಟ್ಟರೂ ಅದನ್ನು ಗೌರವಿಸಲಿಲ್ಲ. ಸ್ತ್ರೀಯರನ್ನು ಗೌರವಿಸದ ಇವರ ಧರ್ಮದ ಹೆಜ್ಜೆ ಯಾವುದು ? ಈ ನಾಯಕರುಗಳಿಗೆ ರಾಜಕೀಯ ಚಹರೆಯೇ ಇಲ್ಲ ವಿವಾದಗಳನ್ನು ಸೃಷ್ಟಿಸುವುದೇ ಇವರ ಬೇಳೆಯಾಗಿದೆ. ಅದನ್ನು ಬೇಯಿಸಲು ಇವರು ಹೊರಟಿದ್ದಾರೆ ಎಂದರು.

ಹಾಗೆ ನೋಡಿದರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ #DCM D K Shivakumar ಮೊದಲು ಧರ್ಮಸ್ಥಳದ ಬಗ್ಗೆ ಮಾತನಾಡಿದರು. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಎಂಬ ಮಾತನ್ನು ಇವರ ಹೇಳಿದ ಮೇಲೆ ಬಿಜೆಪಿಯವರಿಗೆ ಜ್ಞಾನೋದಯವಾಯಿತು. ಧರ್ಮಸ್ಥಳದ ಬಗ್ಗೆ ಏನಾದರೂ ಮತ್ತೆ ಪ್ರೀತಿ ಹುಟ್ಟಿದ್ದರೆ ಅದಕ್ಕೆ ಸರ್ಕಾರವೇ ಕಾರಣ. ಸರ್ಕಾರ ಎಸ್‌ಐಟಿಯನ್ನು ರಚನೆ ಮಾಡದೇ ಇದ್ದರೆ ಯಾವ ಸತ್ಯಗಳು ಹೊರಬರುತ್ತಿರಲಿಲ್ಲ. ಎಸ್‌ಐಟಿ ಇನ್ನು ಯಾವ ತೀರ್ಮಾನವನ್ನು ಕೊಟ್ಟಿಲ್ಲ. ಅಪರಾಧಿಗಳೆಂದು ಹೇಳುವವರು ಯಾರ ಬೆಂಬಲಿಗರಾಗಿದ್ದರು ಎಂದು ಬಿಜೆಪಿಯವರು ಯೋಚಿಸಬೇಕು. ಈ ತಿಮ್ಮಾರೆಡ್ಡಿ ಯಾರು ? ಗಿರೀಶ್ ಮಟ್ಟಣ್ಣ ಎಲ್ಲಿದ್ದ ? ಯಾವ ಪಕ್ಷದಲ್ಲಿದ್ದ ? ಇರ‍್ಯಾರು ಕಾಂಗ್ರೆಸ್‌ಪರ ಅಲ್ಲ, ಎಡಪಂಥೀಯರು ಅಲ್ಲ ಹಾಗಾಗಿ ಸ್ವಲ್ಪದಿನ ಕಾಯಲಿ ಸತ್ಯಗಳು ಹೊರಬರುತ್ತವೆ. ಹೆಗಡೆಯವರು ದೋಷಮುಕ್ತರಾಗುತ್ತಾರೆ ಎಂಬ ನಂಬಿಕೆ ನಮಗೂ ಇದೆ. ದೋಷಮುಕ್ತರಾಗಲಿ ಆದರೆ ತಪ್ಪು ಮಾಡಿದ್ದರೆ ಶಿಕ್ಷೆಯೂ ಆಗಲಿ ಎಂದರು.
ದಸರಾದ ಉದ್ಘಾಟನೆಗೆ ಲೇಖಕಿ ಬಾನುಮಸ್ತಾಕ್ ಅವರನ್ನು ಆಹ್ವಾನಿಸಿರುವುದಕ್ಕೆ ಬಿಜೆಪಿಯವರು ವಿನಾಕಾರಣ ಅಪಸ್ವರ ಎತ್ತುತ್ತಿದ್ದಾರೆ. ಒಬ್ಬ ಮಹಿಳೆ ಎಂಬ ಕಾರಣಕ್ಕೆ ಇದನ್ನು ಒಪ್ಪುತ್ತಿಲ್ಲ. ಈ ಹಿಂದೆ ನಿಸಾರ್ ಅಹ್ಮದ್ ಅವರನ್ನು ಇವರು ಒಪ್ಪಿದ್ದರು ತಾನೆ. ಈಗ ಯಾಕೆ ಇಲ್ಲ, ಯಾವುದೋ ಸಂದರ್ಭದಲ್ಲಿ ಕನ್ನಡ ಭಾಷೆಗೆ ಸಂಬAಧಿಸಿದAತೆ, ಭಾವುಟಕ್ಕೆ ಸಂಬAಧಿಸಿದAತೆ ಮಾತನಾಡಿದ್ದನ್ನು ತಳುಕು ಹಾಕುವುದು ಸರಿಯಲ್ಲ, ಸಾಹಿತ್ಯದ ಸಂದರ್ಭದಲ್ಲಿ ಬಂಡಾಯ, ದಲಿತ ಎಂಬ ಎಲ್ಲಾ ವಿರೋಬಾಸಗಳಿವೆ. ಅದನ್ನೇ ಇಟ್ಟುಕೊಂಡು ಈಗ ಟೀಕಿಸುವುದು ಎಷ್ಟರಮಟ್ಟಿಗೆ ಸರಿ ಎಂದರು.
ಮೈಸೂರು ಮಹಾರಾಜರೇ ತಮ್ಮ ಮೆರವಣಿಗೆಯಲ್ಲಿ ಆಗಿನ ದಿವಾನರಾಗಿದ್ದ ಮಿರ್ಜಾಇಸ್ಮಾಯಿಲ್ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡು ಅಂಬಾರಿ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಈ ಇತಿಹಾಸ ಇವರಿಗೆ ಗೊತ್ತಿಲ್ಲವೇ ? ರಾಜ ಪದ್ಧತಿ ರದ್ಧಾದ ಮೇಲೆ ಇದು ನಾಡಹಬ್ಬವಾಗಿದೆ. ಚಾಮುಂಡಿ ಬೆಟ್ಟದಲ್ಲಿ ಎಲ್ಲಾ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಬಾನುಮಸ್ತಾಕ್ ಮೆರವಣಿಗೆಗೆ ಚಾಲನೆ ನೀಡುತ್ತಾರೆ. ಅವರನ್ನು ಧರ್ಮದ ಪ್ರತಿನಿಧಿಯಾಗಿ ಆಯ್ಕೆಮಾಡಿಲ್ಲ. ಕನ್ನಡದ ಭಾಷೆಯನ್ನು ಪ್ರಪಂಚದ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಕ್ಕೆ ಮಾಡಲಾಗಿದೆ. ಅಷ್ಟಕ್ಕೂ ಅವರು ವಿವೇಕದ ಮಾತುಗಳನ್ನೇ ಆಡಿದ್ದಾರೆ. ನಾನು ಚಾಮುಂಡಿಗೆ ಹರಕೆ ಹೊತ್ತಿದ್ದೆ ಈಗ ಅದನ್ನು ತೀರಿಸಲೆಂದೇ ನನ್ನನ್ನು ಆಯ್ಕೆಮಾಡಿದ್ದಾರೆ ಎಂದು ಹೇಳಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್, ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್, ಜಿಲ್ಲಾ ವಕ್ತಾರ ರಮೇಶ್ ಶಂಕರಘಟ್ಟ, ಪ್ರಮುಖರಾದ ಜಿ.ಡಿ. ಮಂಜುನಾಥ್, ಧೀರರಾಜ್ ಹೊನ್ನವಿಲೆ, ಮಂಜುನಾಥ ಬಾಬು, ಆರ್. ರಾಜಶೇಖರ್, ಹಾಲೇಶ್, ಸ್ಟೆಲ್ಲಾ ಮಾರ್ಟಿನ್, ಪ್ರತಾಪ್, ಬಸವರಾಜ್ ಮುಂತಾದವರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2025/08/VID-20250820-WA0058.mp4
https://kalpa.news/wp-content/uploads/2024/04/VID-20240426-WA0008.mp4

Tags: DCM D K ShivakumarDharmasthalaKannada NewsKannada News LiveKannada News Online ShivamoggaKannada WebsiteKannadaNewsWebsiteLatestNewsKannadaLocalNewsMalnadNewsNews in KannadaNews KannadaShimogaShivamoggaNewsಡಿ.ಕೆ. ಶಿವಕುಮಾರ್ಧರ್ಮಸ್ಥಳಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮಹಾನಗರ ಪಾಲಿಕೆ ಭ್ರಷ್ಟಾಚಾರ ಮುಕ್ತವಾಗಲಿ: ಈ. ವಿಶ್ವಾಸ್

Next Post

ಭರತನಾಟ್ಯವೇ ಜೀವಂತ ರೂಪವಾಗಿ ಬಂದ ದೀಕ್ಷಾ | ಇದು ಯಾರೂ ಸಾಧಿಸದ ದಾಖಲೆ

kalpa News

kalpa News

Next Post
ಭರತನಾಟ್ಯವೇ ಜೀವಂತ ರೂಪವಾಗಿ ಬಂದ ದೀಕ್ಷಾ | ಇದು ಯಾರೂ ಸಾಧಿಸದ ದಾಖಲೆ

ಭರತನಾಟ್ಯವೇ ಜೀವಂತ ರೂಪವಾಗಿ ಬಂದ ದೀಕ್ಷಾ | ಇದು ಯಾರೂ ಸಾಧಿಸದ ದಾಖಲೆ

Leave a Reply Cancel reply

Your email address will not be published. Required fields are marked *

No Result
View All Result
mysuru rss journey exhibition showcasing its history
English Articles

A Century of RSS Through a Unique Exhibition

by kalpa News
September 17, 2026
0

Kalpa Media House  |  Mysuru | A century of service. A hundred years of organisation, sacrifice and social work And...

Read moreDetails
Mysuru say no to drugs walkathon dcp harsha students

BEDA BRO Should Be Everyone’s Goal : Mysuru DCP Priyamvada calls for Drug-Free Society

September 17, 2026
Sparsh Hospital Sarjapur Bengaluru 1st Anniversary

SPARSH Hospital Sarjapur Celebrates 1st Anniversary, Expands Advanced Healthcare Access

September 16, 2026
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL