ಮುಂಬೈ: ದೇಶದ ಆರ್ಥಿಕತೆಯ ಚೇತರಿಕೆಗೆ ಮಹತ್ವದ ಹೆಜ್ಜೆಯನ್ನಿಟ್ಟಿರುವ ಭಾರತೀಯ ರಿಸರ್ವ್ ಬ್ಯಾಂಕ್ ಸತತ 5ನೆಯ ಬಾರಿ ಬಡ್ಡಿದರವನ್ನು ಕಡಿತಗೊಳಿಸಿದೆ.
ಈ ಕುರಿತಂತೆ ಇಂದು ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿರುವ ಆರ್’ಬಿಐ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ.
25 ಬೇಸಿಸ್ ಅಂಶಗಳಷ್ಟು ಇಳಿಕೆ ಮಾಡಲು ಆರ್’ಬಿಐನ ಹಣಕಾಸು ನೀತಿ ಸಮಿತಿ(ಎಂಪಿಸಿ)ಯ ಆರು ಸದಸ್ಯರು ಸಮ್ಮತಿ ನೀಡುವ ಮೂಲಕ ರೆಪೋ ದರ ಶೇ.5.15ಕ್ಕೆ ಇಳಿಕೆಯಾಗಲಿದೆ ಎಂದು ವರದಿ ತಿಳಿಸಿದೆ. ರಿವರ್ಸ್ ರೆಪೋ ದರ ಶೇ.4.9ಕ್ಕೆ ಇಳಿಕೆ ಮಾಡಿದೆ.
ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ ಶೇ.5.40 ರಿಂದ ಶೇ.5.15ಕ್ಕೆ ಇಳಿಸಲಾಗಿದೆ. ರಿವರ್ಸ್ ರೆಪೊ ದರವನ್ನು ಶೇ.4.90 ಮತ್ತು ಬ್ಯಾಂಕ್ ದರವನ್ನು ಶೇ.5.40 ಗೆ ಹೊಂದಿಸಲಾಗಿದೆ.
ಭಾರತವು ದೊಡ್ಡ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದೆ ಎಂಬ ವಿಚಾರದ ನಡುವೆಯೇ, ಆರ್‌ಬಿಐ 2019-20ರ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯನ್ನು ಆಗಸ್ಟ್ ನೀತಿಯಲ್ಲಿ ಶೇ 6.9 ರಿಂದ ಶೇ 6.1 ಕ್ಕೆ ಪರಿಷ್ಕರಿಸಿದ್ದು, 2020-21ರಲ್ಲಿ ಜಿಡಿಪಿ ದೃಷ್ಟಿಕೋನವನ್ನು 7.2ಕ್ಕೆ ಪರಿಷ್ಕರಿಸಲಾಗಿದೆ.
Discussion about this post