ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು 25 ಮೂಲಾಂಶಗಳಷ್ಟು ಹೆಚ್ಚಿಸಿದ್ದು, ಶೇ.6.50ಗೆ ನಿಗದಿಯಾಗಿದೆ.
ಈ ಕುರಿತಂತೆ ಇಂದು ಹೇಳಿಕೆ ನೀಡಿರುವ ಆರ್‌ಬಿಐ, ಮಾರುಕಟ್ಟೆ ಸ್ಥಿರತೆಗಾಗಿ ಈ ಕ್ರಮ ಜರುಗಿಸಲಾಗಿದ್ದು, ಜಾಗತಿಕ ಹಣಕಾಸಿನ ಮಾರುಕಟ್ಟೆಯಲ್ಲಿನ ಅಸ್ಥಿರ ಚಂಚಲತೆ ಹಣದುಬ್ಬರದ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದಿದೆ.
ಎಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇ.7.5 – ಶೇ.7.6 ಎಂದು ಅಂದಾಜಿಸಿದ್ದು ಹಣಕಾಸು ವರ್ಷ 2019ರಲ್ಲಿ ಜಿಡಿಪಿ ಶೇ.7.4ರಷ್ಟಕ್ಕೆ ಸ್ಥಿರವಾಗಿದೆ.
ಇದಕ್ಕೂ ಮುನ್ನ ಜೂನ್ ತಿಂಗಳಿನಲ್ಲಿ ನಾಲ್ಕು ವರ್ಷಗಳ ಬಳಿಕ ರೆಪೋ ದರವನ್ನು 25 ಮೂಲಾಂಶದಷ್ಟು ಏರಿಕೆ ಮಾಡಿತ್ತು. ರೆಪೋ ದರ ಏರಿಕೆ ಪರಿಣಾಮ ಗೃಹ ಸಾಲ, ಇಎಂಐ ಪ್ರಮಾಣ ಸಹ ಏರಿಕೆಯಾಗುವ ಸಾಧ್ಯತೆ ಇದೆ. ರೆಪೋ ದರ ಹೆಚ್ಚಳ ಮಾಡಿರುವ ಕಾರಣ ಮನೆ ಸಾಲ, ವಾಹನ ಹಾಗೂ ವೈಯಕ್ತಿಕ ಸಾಲದ ಮೇಲಿನ ಬಡ್ಡಿಯಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ.
Discussion about this post