ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹಲವಾರು ಕಡೆ ಇಸ್ಪೀಟ್ (ಕಾರ್ಡ್) ಆಡುವುದು ಸಾಮಾನ್ಯವಾಗಿದೆ. ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಒಂದು ಸಣ್ಣ ಕಾರ್ಯಕ್ರಮವಾದರೆ ಇಸ್ಪೀಟ್ ಮಾಂಡ್ಲಾ ಅಂತ ಹಳ್ಳಿಯ ಆಡುಭಾಷೆಯಲ್ಲಿ ಪ್ರಸಿದ್ಧವಾದ ಮಾತಾಗಿದೆ.
ಇಸ್ಪೀಟ್ ಆಡುವುದು ಹಳ್ಳಿಗಳಲ್ಲಿ ರಾತ್ರಿ 1 ಗಂಟೆ ಅಥವಾ 2 ಗಂಟೆವರೆಗೆ ಅಥವಾ ಬೆಳೆಗ್ಗೆಯವರೆಗೆ ಆಡುವುದು ಸರ್ವೇಸಾಮಾನ್ಯವಾಗಿದೆ. ಇದರಲ್ಲಿ ಸುಮಾರು ದಿನವೊಂದಕ್ಕೆ 5 ರಿಂದ 15 ಸಾವಿರದವರೆಗೂ ಹಣದ ಚಲಾವಣೆ ಆಗುತ್ತದೆ. ಕೆಲವು ಕಡೆ ಅಲ್ಲಿನ ಕಾರ್ಯಕ್ರಮದ ಮನೆಯವರೇ ಆಯೋಜಿಸುವುದು ಇರುತ್ತದೆ.
ಹಳ್ಳಿಗಳಲ್ಲಿ ಕಾರ್ಯಕ್ರಮದ ಮನೆಗೆ ಮಧ್ಯಾನ್ಹದ ಊಟಕ್ಕೆ ಹೋಗುವುದಕ್ಕಿಂತ ಹೆಚ್ಚಿನದಾಗಿ ರಾತ್ರಿ ಊಟಕ್ಕೆ ಹೋಗುವುದು ಒಂದು ರೂಢಿ ಕಾರಣ ಇಸ್ಪೀಟ್ ಆಡುವುದು.
ಆದರೆ ಇಂದು ಹಳ್ಳಿಗಳಲ್ಲಿ ಕಾರ್ಯಕ್ರಮಗಳಲ್ಲಿ ಆಡುವುದು ಕಡಿಮೆಯಾಗಿದೆ. ಕಾರಣ ಅಲ್ಲಿನ ಹಿರಿಯ ತಲೆಮಾರು ಮಾಯವಾಗುತ್ತಿದೆ. ಯುವಕರು ಪೇಟೆ ಅಥವಾ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿರುವ ಕಾರಣದಿಂದ ಈ ಕಲೆ ಹಳ್ಳಿಗಳಲ್ಲಿ ನಶಿಸಿ ಹೋಗುವ ಹಂತಕ್ಕೆ ಬಂದು ತಲುಪಿದೆ ಮತ್ತು ನಶಿಸಲು ಕಾರಣ ಕೆಲವೊಂದಿಷ್ಟು ಸರ್ಕಾರ ತಂದಿರುವ ಕಾನೂನುಗಳು ಇರಬಹುದು. ಇನ್ನು ಹಲವಾರು ಹಳ್ಳಿಯ ಕಲೆಗಳು ಹಳ್ಳಿಗಳಲ್ಲಿ ನಶಿಸಿಹೋಗುತ್ತಿವೆ.
ಉದಾಹರಣೆಗೆ: ಕೋಳಿಪಡೆ(ಕೋಳಿಗಳ ಕಾಲುಗಳಿಗೆ ಚಾಕುಕಟ್ಟಿ ಹೋರಾಡಲು ಬಿಡುವುದು)
ಕಪ್ಪು ಬಿಳುಪು(ಈ ಆಟ ಸಾಮಾನ್ಯವಾಗಿ ದೀಪಾವಳಿ, ಯುಗಾದಿ, ಮುಂತಾದ ಹಬ್ಬಗಳಲ್ಲಿ ಆಡುತ್ತಾರೆ)
ಜಲ್ಲಿಕಟ್ಟು (ಇದಕ್ಕಾಗಿ ಹಲವೆಡೆ ಪ್ರಾಣಿಗಳನ್ನು ಸಾಕುತ್ತಾರೆ)
ಹೀಗೆ ಮುಂತಾದ ಜೂಜು ಅಥವಾ ಹಣಗಳಿಸುವ ಆಟಗಳು ಹಳ್ಳಿಳಲ್ಲಿ ನಿಲ್ಲುತ್ತಾ ಹೋಗಿವೆ…
ಆದರೆ ಇಂದು ಹಲವಾರು ಆಟಗಳಿಗೆ Onlineನಲ್ಲಿ ಪ್ರಾರಂಭಗೊಳ್ಳುತ್ತಿರುವ ಕಾರಣ ಯುವ ಪೀಳಿಗೆ ಅಲ್ಲಿಗೆ ಆಕರ್ಷಿತ ಗೊಳ್ಳುತ್ತಿವೆ.
ಇದಕ್ಕೆ ಕಣ್ಣೆದುರಿಗಿನ ಸಾಕ್ಷಿ ಎಂದರೆ ಸೋಷಿಯಲ್ ಮೀಡಿಯಾದಲ್ಲಿ advertisement ತೋರಿಸುವ ಪ್ರಕಾರ.
ಕೇವಲ ಒಬ್ಬ ರೈತ ಸುಮಾರು 1 ಲಕ್ಷ ಹಣ ಸಂಪಾದಿಸುತ್ತಾನೆ. ಕೇವಲ ಒಬ್ಬ ವಿದ್ಯಾರ್ಥಿ ತನ್ನ ಓದನ್ನು ಬಿಟ್ಟು 40 ಸಾವಿರ ಹಣ ಸಂಪಾದಿಸಿದ್ದಾನೆ ಎಂಬೆಲ್ಲಾ ಮಾಹಿತಿಯ ಜಾಹೀರಾತನ್ನು ನೀಡಿ ಯುವಕರನ್ನು ಸೆಳೆಯುವಲ್ಲಿ Dreem11, ರಮ್ಮಿ.ಕಾಂ, ಖೇಲ್ ರಮ್ಮಿ, MPL ಮುಂತಾದ online gameಗಳು ಯುವಕರಿಗೆ ಕೈಬೀಸಿ ಕರೆಯುತ್ತಿದೆ.
ಇದರಲ್ಲಿ ಹಣ ಕಟ್ಟಲು ಅಥವಾ ಹಣವನ್ನು ಕಳೆದುಕೊಳ್ಳಲು ಕೊನೆಯೆಂಬುದೇ ಇಲ್ಲ. ಸರ್ಕಾರ ಜೂಜು ಆಡುವುದು ತಪ್ಪು ಎಂದು ನಿಯಮ ತಂದಿದೆ ಆದರೆ Onlineನಲ್ಲಿ ಆಡುವುದು ನಿಯಮದ ಪ್ರಕಾರ ಉಲ್ಲಂಘನೆ ಆಗುವುದಿಲ್ಲವೇ ಅಥವಾ ಜನರಿಗೆ ಅಥವಾ ಸಮಾಜವನ್ನು ತಿದ್ದುವ ಸುದ್ದಿ ಮಾಧ್ಯಮ ಅಥವಾ ದೃಶ್ಯ ಮಾಧ್ಯಮಗಳು ಇದನ್ನು ಪ್ರಸಾರ ಮಾಡುವುದು ಎಸ್ಟುಸರಿ.
ಎಲ್ಲವನ್ನು ಕೇವಲ ನಮ್ಮ ಉದ್ಯಮಕ್ಕೆ ಲಾಭವಾಗುತ್ತದೆ ಎಂಬ ಕಾರಣಕ್ಕೆ ದಾರಿ ತಪ್ಪುವ ಮಾಹಿತಿ ಅಥವಾ advertisement ಪ್ರಸಾರ ಮಾಡುವುದು ಎಷ್ಟರಮಟ್ಟಿಗೆ ಸರಿ.
ನಿಮ್ಮ ವ್ಯವಹಾರ ವ್ಯಾಪಾರ ಜನರ ಪರವಾಗಿರಬೇಕೆ ಹೊರತು ದಿಕ್ಕು ತಪ್ಪಿಸುವ ಮಟ್ಟಿಗೆ ಹೋಗಬಾರದು.
Get in Touch With Us info@kalpa.news Whatsapp: 9481252093
Discussion about this post