No Result
View All Result
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ
English Articles

Ramachandrapura Seer Hails PM Narendra Modi’s Leadership

by ಕಲ್ಪ ನ್ಯೂಸ್
June 10, 2026
0

Kalpa Media House  |  Honavar/Sagara  | Jagadguru Shankaracharya Sri Raghaveshwara Bharathi Mahaswamiji of Ramachandrapura Math has extended his congratulations to...

Read moreDetails
ಬ್ರೇಕ್‌ಥ್ರೂ | ದೇಶ ಭದ್ರತೆಯ ಜೋಜಿಲಾ ಸುರಂಗ ಕಾಮಗಾರಿಯಲ್ಲಿ ಐತಿಹಾಸಿಕ ಸಾಧನೆ

MEIL Scripts Himalayan History with Final Breakthrough of Zojila Tunnel

June 9, 2026
ಸಾಗರ | ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವಿಗೆ ಹಾವು ಕಚ್ಚಿ ಸಾವು

18-Month-Old Girl Dies After Falling Into Water Tank in Bagalkot

June 9, 2026
2025–26ನೇ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ಗಳಿಸಿದ ಒಟ್ಟು ಆದಾಯವೆಷ್ಟು ಗೊತ್ತಾ?

ILCAD 2026 Observed in Mysuru Division; SWR Promotes Level Crossing Safety

June 9, 2026
ಬೆಂಗಳೂರು–ತುಮಕೂರು ರೈಲು ಮಾರ್ಗದ ವಿದ್ಯುತ್ ವ್ಯವಸ್ಥೆ ಮೇಲ್ದರ್ಜೆಗೆ | ₹162.57 ಕೋಟಿ ಅನುಮೋದನೆ

Indian Railways Sanctions ₹162.57 Crore Upgrade for Bengaluru–Tumakuru Rail Section

June 9, 2026
  • Advertise With Us
  • Grievances
  • About Us
  • Contact Us
Thursday, June 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಗೋ ಆಧರಿತ ಪದ್ಧತಿಯಿಂದಷ್ಟೇ ಕೃಷಿ ಪುನರುತ್ಥಾನ: ಕೃಷಿ ತಜ್ಞ ಪಾಟೀಲ ಅಭಿಮತ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 6, 2019
in Small Bytes, ಉತ್ತರ ಕನ್ನಡ
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೋಸ್ವರ್ಗ(ಸಿದ್ದಾಪುರ):
ದೇಶದಲ್ಲಿ ಕೃಷಿಯ ಪುನರುತ್ಥಾನಕ್ಕೆ ಗೋ ಆಧರಿತ ಕೃಷಿ ಅಗತ್ಯ. ಇದಕ್ಕೆ ಮಾನಸಿಕವಾಗಿ ವಿಜ್ಞಾನಿಗಳಲ್ಲೇ ಪರಿವರ್ತನೆ ಬರಬೇಕು ಎಂದು ನವದೆಹಲಿಯ ರಾಷ್ಟ್ರೀಯ ಕೃಷಿ ಸಂಶೋಧನಾ ಸಂಸ್ಥೆಯ ಮಾಜಿ ಮುಖ್ಯಸ್ಥ ಡಾ.ಎಸ್.ಎ. ಪಾಟೀಲ್ ಅಭಿಪ್ರಾಯಪಟ್ಟರು.

ವಿಶ್ವಮಣ್ಣಿನ ದಿನಾಚರಣೆ ಅಂಗವಾಗಿ ಶ್ರೀ ರಾಮಚಂದ್ರಾಪುರ ಮಠ, ಬಾಗಲಕೋಟೆ ತೋಟಗಾರಿಕೆ ವಿವಿ ಮತ್ತು ಶಿರಸಿ ಕೃಷಿ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಮಣ್ಣಿನಲ್ಲೂ ವೈವಿಧ್ಯವಿದೆ. ಸೂಕ್ಷ್ಮಾಣು ಜೀವಿ, ಸಸ್ಯಸಂಕುಲ, ಗೋವು ಹಾಗೂ ಮನುಷ್ಯನಿಗೆ ನಿಕಟ ಸಂಬಂಧವಿದೆ. ವಿಶ್ವವಿದ್ಯಾನಿಲಯಗಳ ಜತೆ ಮಠಗಳು ಹಾಗೂ ಸಂಘ ಸಂಸ್ಥೆಗಳು ಇದರಲ್ಲಿ ಕೈಜೋಡಿಸಬೇಕು. ಗಡ್ಡೆಗೆಣಸು ತಿಂದವರ ಆಯುಷ್ಯ ಹೆಚ್ಚು; ಮಣ್ಣಿನ ಮೇಲೆ ಬೆಳೆದದ್ದನ್ನು ಸೇವಿಸಿದವರಿಗೆ ಆರೋಗ್ಯ ಕಡಿಮೆಯಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ.

ಗೋಮಯದಲ್ಲಿ ಅಪಾರ ಪ್ರಮಾಣದ ಪೆನ್ಸುಲಿನ್ ಇದೆ. ಪಂಚಗವ್ಯದ ಬಗ್ಗೆ ನಡೆಸಿದ ಮೂರು ಸಂಶೋಧನೆಗಳಿಗೆ ರಾಷ್ಟ್ರೀಯ ಗೋ ಅನುಸಂಧಾನ ಪರಿಷತ್‌ಗೆ ಪೇಟೆಂಟ್ ದೊರಕಿದೆ. ಇದರಲ್ಲಿ ಕ್ಯಾನ್ಸರ್ ಚಿಕಿತ್ಸೆಯೂ ಸೇರಿದೆ. ರಾಮಚಂದ್ರಾಪುರ ಮಠ ಇದಕ್ಕಿಂತಲೂ ಉನ್ನತ ಸಂಶೋಧನೆಗಳನ್ನು ನಡೆಸಲು ಮುಂದಾಗಿದ್ದು, ಇದರಲ್ಲಿ ಕೈಜೋಡಿಸುವುದಾಗಿ ಪಾಟೀಲ್ ಹೇಳಿದರು.

ಬ್ರಿಟಿಷ್ ಅಥವಾ ಅಮೆರಿಕ ಮೂಲದಿಂದ ಬಂದ ಸಂಶೋಧನೆಗಿಂತ ನಮ್ಮ ಪ್ರಾಚೀನ ಪದ್ಧತಿಯಲ್ಲಿದ್ದ ಸುಸ್ಥಿರತೆ ಕಾಪಾಡುವ ಸಲುವಾಗಿ ಮಣ್ಣು ಹಾಗೂ ಗೋವನ್ನು ಜೋಡಿಸಿರುವುದು ವಿಶ್ವದಲ್ಲೇ ವಿಶಿಷ್ಟ. ನಳಂದಾ, ತಕ್ಷಶಿಲೆಗೆ ವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದಂತೆ, ಗೋವಿನ ಬಗ್ಗೆ ಅಧ್ಯಯನ ನಡೆಸಲು ರಾಮಚಂದ್ರಾಪುರ ಮಠಕ್ಕೆ ವಿದೇಶಿಯರು ಬರುವ ದಿನಗಳು ದೂರವಿಲ್ಲ ಎಂದರು.

ಮನುಷ್ಯ ಮಾನವನಾದದ್ದು ಒಕ್ಕಲುತನದಿಂದ. ಪ್ರಾಚೀನ ಕಾಲದಿಂದ ನಾಗರಿಕತೆಯ ಬೆಳವಣಿಗೆಯಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ. ಗೋವಿನಲ್ಲಿ ಎಲ್ಲ ಸೂಕ್ಷ್ಮಾಣು ಜೀವಿಗಳು ಅಡಗಿವೆ. ಒಕ್ಕಲುತನದ ಮೂಲವೇ ಗೋವು ಎನ್ನುವುದು ನಮ್ಮ ಪುರಾತನ ಸಂಸ್ಕೃತಿಯ ಜೀವಾಳವಾಗಿತ್ತು. ಇದರ ಮಹತ್ವವನ್ನು ಪುನಃಸ್ಥಾಪಿಸುವ ನಿಟ್ಟಿನಲ್ಲಿ ಶ್ರೀಮಠ ಮುಂದಾಗಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.


ಸಿಂಧೂ ನದಿ ಸಂಸ್ಕೃತಿಯಿಂದ ಹಿಡಿದು ಭವ್ಯ ಇತಿಹಾಸ ಇದ್ದರೂ, ಕೃಷಿ ವಿಜ್ಞಾನದ ಬಗ್ಗೆ ಭಾರತದ ವಿಜ್ಞಾನಿಗಳು ಬರೆದ ಕೃತಿಗಳಿಲ್ಲದಿರುವುದು ವಿಪರ್ಯಾಸ ಎಂದರು.

ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ವೀಡಿಯೋ ಸಂದೇಶ ನೀಡಿ ಘರ್ ಕೀ ಮಾತಾ, ಘರ್ ತೇ ಮಾತಾ, ಗೋಮಾತೆಯ ಸಂಬಂಧ ಸುಮಧುರವಾಗಿರುವವರೆಗೂ ದೇಶ ಸುಭಿಕ್ಷವಾಗಿತ್ತು. ಭೂತಾಯಿಗೆ ವಿಷ ಉಣಬಯಸಿದ ಪರಿಣಾಮವನ್ನು ಇಂದು ಮನುಕುಲ ಎದುರಿಸುತ್ತಿದೆ. ಇದನ್ನು ತಡೆಯುವ ಪ್ರಯತ್ನಕ್ಕೆ ಶ್ರೀಮಠ ಮುಂದಾಗಿದೆ ಎಂದರು.

ಭೂಮಿಗೆ ಸಲ್ಲಬೇಕಾದ ಗೌರವ ನೀಡದ ಫಲವಾಗಿ ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ಫಲವಾಗಿ ಮನುಕುಲವೂ ಸತ್ವ ಕಳೆದುಕೊಳ್ಳುತ್ತಿದೆ. ಮಣ್ಣಿನ ಫಲವತ್ತತೆ ರಕ್ಷಣೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾಲ್ಕು ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ಶ್ರೀಮಠ ಆಯೋಜಿಸುತ್ತಿದೆ ಎಂದು ವಿವರಿಸಿದರು.
ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ ಅಧ್ಯಕ್ಷತೆ ವಹಿಸಿದ್ದರು. ಹೆತ್ತತಾಯಿ, ಭೂತಾಯಿ ಹಾಗೂ ಗೋಮಾತೆಯನ್ನು ರಕ್ಷಿಸಬೇಕಾದ್ದು ಕರ್ತವ್ಯ ಎಂದರು.

ಶ್ರೀಮಠದ ಸಂಶೋಧನಾ ಖಂಡದ ಶ್ರೀಸಂಯೋಜಕ ಗುರುರಾಜ ಪಡೀಲು ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಮಠದ ವತಿಯಿಂದ ಸ್ವಸ್ಥ ಮಣ್ಣು, ಶುದ್ಧ ಆಹಾರ, ಉತ್ತಮ ಆರೋಗ್ಯದ ನಿಟ್ಟಿನಲ್ಲಿ ಸಂಶೋಧನೆ ನಡೆಸಲು ಗೋಸ್ವರ್ಗದಲ್ಲಿ ಸಂಶೋಧನಾ ಕೇಂದ್ರ ನಿರ್ಮಾಣವಾಗುತ್ತಿದೆ ಎಂದು ವಿವರಿಸಿದರು.

ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ. ನಾಯಕ್, ಕರ್ನಾಟಕ ಉಪಮುಖ್ಯಮಂತ್ರಿಗಳ ಹಾಗೂ ಕೃಷಿ ಸಚಿವಾಲಯದ ವಿಶೇಷ ಕರ್ತವ್ಯಾಧಿಕಾರಿ, ಡಾ.ಎ.ಬಿ. ಪಾಟೀಲ್, ಇಂಫಾಲದ ಕೇಂದ್ರೀಯ ಕೃಷಿ ವಿವಿ ನಿವೃತ್ತ ಸಂಶೋಧನಾ ನಿದೇರ್ಶಕ ಡಾ.ಶ್ರೀನಿವಾಸಮೂರ್ತಿ, ಮಂಡ್ಯ ಸರ್ಕಾರಿ ಕೃಷಿ ಕಾಲೇಜಿನ ಮಣ್ಣು ಮತ್ತು ಕೃಷಿ ರಸಾಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಎಸ್. ಪ್ರಕಾಶ್, ಶಿರಸಿ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಎನ್.ಕೆ. ಹೆಗಡೆ ಉಪಸ್ಥಿತರಿದ್ದರು. ಹರ್ಷ ಭಟ್ ದಂಪತಿ ಸಭಾಪೂಜೆ ನೆರವೇರಿಸಿ, ಎನ್.ಕೆ. ಹೆಗಡೆ ವಂದಿಸಿದರು.

ಕೃಷಿ ಪರಿಕರ, ಸಾವಯವ ಉತ್ಪನ್ನ, ಕೃಷಿ ಉತ್ಪನ್ನ, ಗವ್ಯೋತ್ಪನ್ನಗಳ ಪ್ರದರ್ಶನ ಮೇಳ, ಮೃತ್ತಿಕೆಯಿಂದ ಗೋ ತುಲಾಭಾರ, ಗೋಪೂಜೆ, ವಿವಿಧ ಆಯಾಮಗಳಲ್ಲಿ ಕೃಷಿ ವಿವಿಗಳ ಸಂಶೋಧನಾ ವಿದ್ಯಾರ್ಥಿಗಳು ಕೈಗೊಂಡ ಸಂಶೋಧನೆಯ ಪೋಸ್ಟರ್ ಪ್ರದರ್ಶನ ವಿಚಾರ ಸಂಕಿರಣದ ಪ್ರಮುಖ ಆಕರ್ಷಣೆಗಳಾಗಿದ್ದವು. ಮಣ್ಣಿಗೆ ಜೀವಾಮೃತ ನೀಡುವ ಮೂಲಕ ವಿಶಿಷ್ಟವಾಗಿ ಸಮಾರಂಭ ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಉಚಿತ ಗೋಚಿಕಿತ್ಸಾ ಶಿಬಿರ ಹಾಗೂ ಖನಿಜಾಂಶ ವಿತರಣೆ, 40 ಪ್ರಜಾತಿಯ ಮಣ್ಣಿನ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು. ಡಾ.ಶಿವಾನಂದ ಹೊಂಗಲ್ ಅತಿಥಿಗಳನ್ನು ಪರಿಚಯಿಸಿ, ಡಿ.ಎಸ್. ಹೆಗಡೆ ನಿರೂಪಿಸಿದರು.

Get in Touch With Us info@kalpa.news Whatsapp: 9481252093

Tags: Agricultural ScienceDharawadGo HeavenKannada NewsMalnad NewsSri Raghaveshwara Bharati SwamijiWorld Soil Dayಕೃಷಿಕೃಷಿ ವಿಜ್ಞಾನಗೋಸ್ವರ್ಗಧಾರವಾಡವಿಶ್ವಮಣ್ಣಿನ ದಿನಾಚರಣೆಶ್ರೀ ರಾಘವೇಶ್ವರ ಭಾರತೀ ಸ್ವಾಮಿಶ್ರೀ ರಾಮಚಂದ್ರಾಪುರ ಮಠ
Share197Tweet123Send
Previous Post

ಗುರುವು ಮೃತನಾಗಲ್ಲ, ಅಮೃತನಾಗುತ್ತಾನೆ: ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

Next Post

15 ಕ್ಷೇತ್ರಗಳ ಉಪಚುನಾವಣೆ: ಎರಡು ಕ್ಷೇತ್ರಗಳಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಪ್ರಧಾನಿ ಮೋದಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡದೇ ಇದ್ದದ್ದೇ ದಕ್ಷಿಣದಲ್ಲಿ ಬಿಜೆಪಿಗೆ ಹಿನ್ನಡೆ?

15 ಕ್ಷೇತ್ರಗಳ ಉಪಚುನಾವಣೆ: ಎರಡು ಕ್ಷೇತ್ರಗಳಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಗಮನಿಸಿ! ಜ.21-22ರಂದು ಶಿವಮೊಗ್ಗ ನಗರ, ಗ್ರಾಮಾಂತರದ ಈ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ

ಗಮನಿಸಿ! ಜೂ.12ರಂದು ಶಿವಮೊಗ್ಗದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

June 11, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಮೈಸೂರು–ಮದಾರ್ ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್‌ಗೆ ಎರಡು ಹೆಚ್ಚುವರಿ ಟ್ರಿಪ್‌ಗಳ ವಿಸ್ತರಣೆ

June 11, 2026
SWR to run special trains for Good Friday, Easter rush

ಬೆಂಗಳೂರು, ಹುಬ್ಬಳ್ಳಿ, ಚೆನ್ನೈ  ಸೇರಿದಂತೆ ಒಟ್ಟು 25 ರೈಲುಗಳ ಬಿಗ್ ಅಪ್ಡೇಟ್ ಇಲ್ಲಿದೆ

June 11, 2026
ಹೊಸನಗರದಲ್ಲಿ ಎರಡು ಕಳ್ಳತನ ಪ್ರಕರಣ: ಭದ್ರಾವತಿಯ ಯುವಕ ಬಂಧನ

ಹೊಸನಗರದಲ್ಲಿ ಎರಡು ಕಳ್ಳತನ ಪ್ರಕರಣ: ಭದ್ರಾವತಿಯ ಯುವಕ ಬಂಧನ

June 11, 2026
ಎಸ್‌ಎಸ್‌ಎಲ್‌ಸಿ ಉತ್ತರಪತ್ರಿಕೆ ಮೌಲ್ಯಮಾಪನ ಮರುಪರೀಶಿಲನಾ ಅರ್ಜಿ ವಜಾ

ಚೆಕ್ ಬೌನ್ಸ್ ಪ್ರಕರಣ: 2 ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆ ಸಾಧ್ಯವಿಲ್ಲ: ಹೈಕೋರ್ಟ್ ಸ್ಪಷ್ಟನೆ

June 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL