ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ಬಾರಂದೂರು ಬಳಿಯಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ 50 ಸಾವಿರ ರೂ. ದರೋಡೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.
Also Read: ಕೆಎಚ್’ಬಿ ಬಡಾವಣೆ ವಸತಿ ಹಂಚಿಕೆಯಲ್ಲಿ ವಂಚನೆ: ಜೆಡಿಎಸ್ ಅಧ್ಯಕ್ಷ ತಿಪ್ಪೇಸ್ವಾಮಿ ಆರೋಪ
ಮೇ 9ರಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ನಿವಾಸಿಯೊಬ್ಬರು ತಮ್ಮ ಹೊಸ ಮನೆಯ ಗೃಹಪ್ರವೇಶದ ಖರ್ಚಿಗೆಂದು 1 ಲಕ್ಷ ರೂ. ಹಣವನ್ನು ಲಗೇಜ್ ವಾಹನದಲ್ಲಿ ತೆರಳುತ್ತಿದ್ದರು. ಬಾರಂದೂರು ಬಳಿ ಕೃಷಿ ಇಲಾಖೆ ಕಚೇರಿ ಬಳಿಯಲ್ಲಿ ದುಷ್ಕರ್ಮಿಗಳನ್ನು ಅವರನ್ನು ಅಡ್ಡಗಟ್ಟಿ 50 ಸಾವಿರ ರೂ. ಹಣವನ್ನು ದೋಚಿದ್ದಾರೆ.
Also Read: ಧರ್ಮ ಬೇಕಾ? ಜೀವನಾ ಬೇಕಾ? ಜನರನ್ನು ಪ್ರಶ್ನಿಸಿದ ಎಚ್.ಡಿ. ಕುಮಾರಸ್ವಾಮಿ
ಈ ಕುರಿತಂತೆ ಹಣ ಕಳೆದುಕೊಂಡವರು ಪೇಪರ್ ಟೌನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಚೇನಹಳ್ಳಿಯ ಬಸವರಾಜ(24), ಪವನ್(26), ಶಿವಮೊಗ್ಗ ಯರಗನಾಳ್’ನ ಭರತ್(24) ಎನ್ನುವವರನ್ನು ಬಂಧಿಸಿ ಅವರಿಂದ 37 ಸಾವಿರ ರೂ. ಹಣ ಹಾಗೂ ಕೃತ್ಯಕ್ಕೆ ಬಳಸಿದ ಎರಡು ಬೈಕನ್ನು ವಶಕ್ಕೆ ಪಡೆದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















