ರಾಯಚೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗ್ವತ್ ಇಂದು ಮಂತ್ರಾಲಯಕ್ಕೆ ಭೇಟಿ ನೀಡಿ, ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಮೂಲ ಬೃಂದಾವನದ ದರ್ಶನ ಪಡೆದರು.
ಶ್ರೀಮಠಕ್ಕೆ ಆಗಮಿಸಿದ ಭಾಗ್ವತ್ ಅವರನ್ನು ಮಠದ ವತಿಯಿಂದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಸ್ವತಃ ಸ್ವಾಗತಿಸಿದರು.
ಆನಂತರ ರಾಯರ ಮೂಲ ಬೃಂದಾವನ ದರ್ಶನ ಪಡೆದ ಭಾಗ್ವತ್ ಅವರಿಗೆ ಶ್ರೀಗಳು ಶೇಷವಸ್ತ್ರ ಹೊದಿಸಿ, ಸ್ಮರಣಿಕೆ ಹಾಗೂ ಫಲ ಮಂತ್ರಾಕ್ಷತೆ ನೀಡಿ ಗೌರವಿಸಿದರು.
ಈ ವೇಳೆ ಸ್ವಾಮಿಗಳೊಂದಿಗೆ ಭಾಗ್ವತ್ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.
Discussion about this post