ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಇಂದು ಘೋಷಣೆ ಮಾಡಿದ್ದು, ದಿ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಪ್ರಶಸ್ತಿಯ ಮೂಲಕ ಗೌರವ ಸೂಚಿಸಲಾಗಿದೆ.
ಎಸ್’ಪಿಬಿ ಅವರ ಜೀವಮಾನದ ಕಲಾ ಸಾಧನೆಯನ್ನು ಪರಿಗಣಿಸಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಲಾಗಿರುವುದು ಇಡಿಯ ಕಲಾ ಲೋಕಕ್ಕೆ ಸಂದ ಗೌರವವಾಗಿದೆ.
ಯಾರಿಗೆಲ್ಲಾ ಪ್ರಶಸ್ತಿ?
ಪದ್ಮ ವಿಭೂಷಣ:
ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ (ಕಲೆ), ಉಡುಪಿಯ ಖ್ಯಾತ ವೈದ್ಯ ಡಾ. ಬೆಳ್ಳೆ ಮೋನಪ್ಪ ಹೆಗ್ಡೆ (ಬಿ.ಎಂ. ಹೆಗ್ಡೆ-ಔಷಧ ಕ್ಷೇತ್ರ), ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ (ಸಾರ್ವಜನಿಕ ಕ್ಷೇತ್ರ), ನರೀಂದರ್ ಸಿಂಗ್ ಕಪಾನಿ (ವಿಜ್ಞಾನ ಮತ್ತು ಇಂಜಿನಿಯರಿಂಗ್) ಮೌಲಾನಾ ವಹಿದುದೀನ್ ಖಾನ್ (ಆಧ್ಯಾತ್ಮ ವಿಭಾಗ), ಬಿ.ಬಿ. ಲಾಲ್ (ಪುರಾತತ್ವ ಶಾಸ್ತ್ರ ವಿಭಾಗ) ಹಾಗೂ ಒಡಿಶಾದ ಸುದರ್ಶನ್ ಸಾಹೊ (ಕಲೆ).
ಪದ್ಮ ಭೂಷಣ
10 ಸಾಧಕರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ, ಮಾಜಿ ಕೇಂದ್ರ ಸಚಿವ ದಿವಂಗತ ರಾಮ್ವಿಲಾಸ್ ಪಾಸ್ವಾನ್, ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್, ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್, ಗುಜರಾತ್ ಮಾಜಿ ಮುಖ್ಯಮಂತ್ರಿ ಕೆಶು ಭಾಯ್ ಪಟೇಲ್, ಕೃಷ್ಣನ್ ನಾಯರ್ ಶಾಂತಕುಮಾರಿ ಚಿತ್ರ, ನೃಪೇಂದ್ರ ಮಿಸ್ರಾ, ಕಲ್ಬೆ ಸಾದಿಕ್, ರಜನಿಕಾಂತ್ ದೇವಿದಾಸ್ ಶ್ರೋಫ್, ತಾರ್ಲೋಚನ್ ಸಿಂಗ್ ಮುಂತಾದವರು.
ಪದ್ಮಶ್ರೀ
ದೇಶದ 102 ಸಾಧಕರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದ್ದು, ಕರ್ನಾಟಕದ ಮೂವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಆರ್.ಲಕ್ಷ್ಮೀನಾರಾಯಣ ಕಶ್ಯಪ್ (ಶಿಕ್ಷಣ), ಬಿ.ಮಂಜಮ್ಮ ಜೋಗತಿ (ಕಲೆ), ಕೆ.ವೈ.ವೆಂಕಟೇಶ್ (ಕ್ರೀಡೆ) ಕ್ಷೇತ್ರದಿಂದ ಪದ್ಮಶ್ರೀಗೆ ಆಯ್ಕೆಯಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post