ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ಕೋವಿಡ್19ನಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಸಹ 1670 ಹೆರಿಗೆ ಮಾಡಿಸುವ ಮೂಲಕ ರಾಜ್ಯದ ಉತ್ತಮ ಸ್ತ್ರೀ ರೋಗ ತಜ್ಞ ಪ್ರಶಸ್ತಿಗೆ ಪಾತ್ರರಾದ ಡಾ.ನಾಗೇಂದ್ರಪ್ಪ ಅವರನ್ನು ಶಾಸಕ ಎಚ್. ಹಾಲಪ್ಪ ಅಭಿನಂದಿಸಿದರು.
ಸಾಗರದ ತಾಯಿ-ಮಗು ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ, ಅಧಿಕಾರಿಗಳು ಮತ್ತು ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಆರೋಗ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ವೈದ್ಯರಿಗೆ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಅಭಿನಂದಿಸಿದರು.
ಇದೇ ವೇಳೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ, ತಾಲೂಕಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಶಾಸಕರು ಅಭಿನಂದಿಸಿದರು.
ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆದ ಧನುಷ್, ಪವನ್ ಕುಮಾರ್, ಪ್ರತಿಕ್ ಶೆಟ್ಟಿ, ಮಂದಾರ, ಶ್ರೇಯಸ್, ಹೇಮಂತ್, ಅಬು ಸೂಫಿಯನ್ ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಟಿಎಚ್’ಒ ಮೋಹನ್ ಕುಮಾರ್, ಡಾ.ಪ್ರಕಾಶ್ ಭೋಸ್ಲೆ, ಡಾ.ವಿನಯ್ ಶೇಖರ್, ಡಾ.ಸುಚಿತ್ರ, ಶ್ರೀಧರ್, ವೈ.ಮೋಹನ್, ಮಾ.ಸ.ನಂಜುಂಡಸ್ವಾಮಿ, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
















