No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Wednesday, April 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನಗರವಾಸಿಗಳಿಗೆ ರಾಹುಗ್ರಸ್ತ ಗ್ರಹಣವಾಗಿರುವ ಲಾಕ್ ಡೌನ್

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 17, 2020
in Special Articles
0
ಇಡಿಯ ಭಾರತದ ಲಾಕ್ ಡೌನ್ ನ ಹಿಂದಿನ ಅಸಲಿಯತ್ತೇನು…?

Image Courtesy: Internet

Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ದೇವ ಸೃಷ್ಟಿಯ ವೈವಿಧ್ಯಮಯ ಜೀವ ಸಂಕುಲವನ್ನು ಹುಲು ಮನುಜನೊಬ್ಬನೇ ತಿಂದು ತೇಗಿದ್ದಾನೆ. ಕಣ್ಣಿಗೆ ಕಾಣುವ ಅತಿ ಚಿಕ್ಕ ಜಂತುವಿನಿಂದ ಹಿಡಿದು ಕಡಲ ದೈತ್ಯ ತಿಮಿಂಗಿಲದ ಪರ್ಯಂತ ಯಾವ ಜೀವಿಯನ್ನು ಮನುಷ್ಯ ಬಿಡಲಿಲ್ಲ. ಬಿಡುತ್ತಿಲ್ಲ. ಬ್ರಹ್ಮಾಂಡ ತನ್ನದು, ತಾನೇ ಬ್ರಹ್ಮಾಂಡದ ದೊರೆ, ವಾರಸುದಾರ ಎಂಬಂತೆ ಮನಸ್ಸು ಬಂದಂತೆ ವರ್ತಿಸುತ್ತಿದ್ದಾನೆ. ಇಲ್ಲಿರುವ ಸಕಲ ಜೀವ ಸಂಕುಲಗಳೂ ಪ್ರಕೃತಿಯ ಪೂರಕ ಎಂದು ಮಾನವ ಒಪ್ಪಿಕೊಂಡಂತೆ ಕಂಡು ಬರುವುದಿಲ್ಲ. ಈಗಾಗಲೇ ಮಾನವನಿಂದಾಗಿ ಹಲವು ಜೀವಿಗಳು ತಮ್ಮ ಅಸ್ತಿತ್ವವನ್ನು ಕಳಕೊಂಡು ಲುಪ್ತವಾಗಿವೆ. ಕೆಲವು ವಿನಾಶದ ಅಂಚಿನಲ್ಲಿವೆ. ಇದಕ್ಕೆಲ್ಲ ಸಿಗುವ ಕಾರಣ ಒಂದೇ ಮಾನವ ಮತ್ತವನ ನಾಲಗೆ.

ನಮ್ಮ ದೇಶದಲ್ಲಿ ಆರ್ಯರ ವಲಸೆಯ ಬಳಿಕ ಯಜ್ಞ ಯಾಗಾದಿಗಳ ಹೆಸರಲ್ಲಿ ಕುದುರೆ, ಕೋಣ, ಕುರಿ, ಕೋಳಿ ಮುಂತಾದ ಆಯ್ದ ಪ್ರಾಣಿ, ಪಕ್ಷಿಗಳನ್ನು ಬಲಿಗೊಟ್ಟು ಭಕ್ಷಿಸಲಾಗುತ್ತಿತ್ತು. ಇದಕ್ಕೆ ಧಾರ್ಮಿಕ ಗ್ರಂಥಗಳಲ್ಲಿ ಸಾಕಷ್ಟು ಉದಾಹರಣೆಗಳಿವೆ. ಮಹಾವೀರ, ಬುದ್ಧರ ಕಾಲದಲ್ಲಿ ಅಹಿಂಸೆಯ ಪ್ರಚಾರ ವ್ಯಾಪಕವಾಗಿ ನಡೆದು ಪ್ರಾಣಿ ಹಿಂಸೆ ಗಣನೀಯವಾಗಿ ಕ್ಷೀಣಗೊಂಡದ್ದು ಇತಿಹಾಸದಿಂದ ತಿಳಿದು ಬರುತ್ತದೆ. ಜೈನ ಧರ್ಮ ಇಂದಿಗೂ ಅಹಿಂಸೆಯ ಪರವಾಗಿ ಗಟ್ಟಿಯಾಗಿ ನಿಂತಿರುವುದನ್ನು ನಾವು ಕಾಣಬಹುದು.

ದಾಳಿಕೋರ ಮುಸಲ್ಮಾನರಿಂದ ಗೋಹತ್ಯೆಗಳು ಆರಂಭವಾದರೆ; ಪಾಶ್ಚಿಮಾತ್ಯರ ಆಗಮನದ ಅನಂತರದಲ್ಲಿ ಸಾರ್ವತ್ರಿಕವಾಯಿತು. ವಿಪರ್ಯಾಸವೆಂದರೆ; ಬೌದ್ಧ ಧರ್ಮವನ್ನು ಒಪ್ಪಿಕೊಂಡ ಚೀನಾದಂತಹ ದೇಶಗಳಲ್ಲಿ ವ್ಯಾಪಕವಾಗಿ ಪ್ರಾಣಿ ಹಿಂಸೆ ನಡೆಯುತ್ತಿವೆ. ಮಾಂಸ ಭಕ್ಷಣೆಯ ಸಲುವಾಗಿ ಸಾಕುಪ್ರಾಣಿ, ಸರೀಸೃಪ, ಜಲಚರ, ವನಚರ ಹಾಗೂ ಕಣ್ಣಿಗೆ ಕಾಣುವ ಯಾವುದೇ ಜೀವಿಗಳನ್ನು ಅವರು ಬಿಡದೇ ಭಕ್ಷಿಸುತ್ತಾರೆ. ಚೀನಾದಲ್ಲಿ ಜಗತ್ತಿನ ಲಭ್ಯ ಜೀವಿಗಳ ಮಾಂಸ ಮಾರಾಟದ ಮಳಿಗೆಗಳು ಅಗಣಿತವಾಗಿವೆ. ಅಂತಹುಗಳಲ್ಲಿ ‘ವುಹಾನ್’ ಮಾರುಕಟ್ಟೆಯೂ ಒಂದು. ಪ್ರಸ್ತುತ ಜಗತ್ತಿನ ತಲ್ಲಣಕ್ಕೆ ಕಾರಣವಾದ ’ಕೊರೋನ’ ಎಂಬ ಮಾರಕ ಸೂಕ್ಷ್ಮ ಜೀವಿಯ ತವರು ಮನೆ ಈ ವುಹಾನ್ ಮಾರುಕಟ್ಟೆ ಎಂದು ಗುರುತಿಸಲಾಗಿದೆ. ಇಲ್ಲಿಯ ತಜ್ಞ ವೈದ್ಯನೊಬ್ಬ ಮೊದಲ ಬಾರಿ ಕೊರೋನಾದ ಬಗ್ಗೆ ಎಚ್ಚರಿಸಿದಾಗ ಚೀನಾದ ಎಡಪಂಥಿಯ ಸರಕಾರ ಅವನಿಗೆ ಜೈಲು ಶಿಕ್ಷೆ ವಿಧಿಸಿತು. ಸರಕಾರಕ್ಕೆ ನಿಜದ ಅರಿವಾಗುವಷ್ಟರಲ್ಲಿ ಆ ವೈದ್ಯ ಇದೇ ಕಾಯಿಲೆಗೆ ಬಲಿಯಾಗಿ ಸತ್ತಿದ್ದ. ವುಹಾನ್’ನಿಂದ ಆರಂಭಗೊಂಡ ಕೊರೋನದ ಜೈತ್ರಯಾತ್ರೆ ಪ್ರಪಂಚದ ಮೂಲೆಗಳಿಗೆ ತಲುಪಿ ರಣಕಹಳೆ ಮೊಳಗಿಸುತ್ತಿದೆ. ಸಂತ್ರಸ್ತ ದೇಶಗಳ ಯಾದಿಯಲ್ಲಿ ನಮ್ಮ ದೇಶವೂ ಮುಂದಿದೆ.

ಮಾರ್ಚು ತಿಂಗಳ ಮೂರನೇ ವಾರದಿಂದ ಆರಂಭವಾದ ಲಾಕ್ ಡೌನ್ ಎಂಬ ಮನೆವಾಸ ಇಂದಿಗೂ ಜಾರಿಯಲ್ಲಿದೆ. ನಾಲ್ಕು ತಿಂಗಳುಗಳು ಮುಗಿಯುತ್ತಾ ಬಂದರೂ ತೆರವಾಗುವ ಲಕ್ಷಣಗಳು ಕಾಣುತ್ತಿಲ್ಲ. ಮೊದಲಿಗೆ ಹದಿನೈದು ದಿನಗಳ ಲೆಕ್ಕಾಚಾರದಲ್ಲಿ ಆರಂಭವಾದ ಲಾಕ್ ಡೌನ್ ಈಗ ಮಾಸಿಕಗಳಿಗೆ ನಿಗದಿಯಾಗತೊಡಗಿದೆ. ಕೊರೋನಾ ಸಾಂಕ್ರಾಮಿಕವಾಗದಂತೆ ತಡೆಯೊಡ್ಡುವ ನೆಲೆಯಲ್ಲಿ ಸರಕಾರ ಲಾಕ್ ಡೌನ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆದರೆ ಈ ವ್ಯವಸ್ಥೆಯ ವ್ಯತಿರಿಕ್ತವಾದ ಪರಿಣಾಮಗಳನ್ನೂ ನಾವು ಕಾಣುತ್ತಿದ್ದೇವೆ. ಹಳ್ಳಿಗಳಲ್ಲಿ ಅಷ್ಟಾಗಿ ಪ್ರತಿಕೂಲ ಪರಿಸ್ಥಿತಿಯನ್ನು ತಂದೊಡ್ಡದ ಲಾಕ್ ಡೌನ್ ನಗರವಾಸಿಗಳ ಬದುಕನ್ನು ಬಗ್ಗಡಗೊಳಿಸಿರುವುದಂತೂ ಸತ್ಯ. ವ್ಯಾಪಾರ ವ್ಯವಹಾರಗಳನ್ನು ಮುಚ್ಚಲಾಗಿದೆ. ಸುಗಮವಾಗಿ ತಾಯ್ನಾಡಿಗೂ ಹೋಗುವಂತಿಲ್ಲ. ಹಲವು ಕಠಿಣ ನಿಯಮಗಳನ್ನು ಪಾಲಿಸಿ ನಂತರ ಹೋದರೂ ಮನೆಯವರು, ಆಸುಪಾಸಿನವರು ಒಪ್ಪಿಕೊಳ್ಳುತ್ತಿಲ್ಲ. ಹೊಟೇಲು ಕ್ಯಾಂಟೀನ್ ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಕನಿಷ್ಠ ವೇತನಕ್ಕೆ ದುಡಿಯುವ ವರ್ಗದ ಜನರ ಬವಣೆ ಸಹ್ಯವಾಗಿಲ್ಲ. ಆರ್ಥಿಕ ದುರ್ಬಲತೆಯಿಂದಾಗಿ ಬದುಕು ಶೋಚನೀಯವಾಗಿದೆ.

ಎಲೆಕ್ಟ್ರಾನಿಕ್ ಮಾಧ್ಯಮಗಳ ಸುದ್ದಿಗಳು ಮರಣ ವಾರ್ತೆಗಳಾಗಿವೆ. ಜನರ ಭಯ ನಿರ್ಮೂಲನೆ ಮಾಡಬೇಕಾದವರು ಭಯ ನಿರ್ಮಾಣ ಮಾಡುತ್ತಿದ್ದಾರೆ. ನಗರವಾಸಿಗಳ ಜೀವನ ಸ್ಥಿತಿ ದಾರುಣವಾಗಿವೆ. ಮಕ್ಕಳ ಶಾಲಾ ಶುಲ್ಕ, ಖಾಸಗಿ ತರಗತಿಗಳ ಶುಲ್ಕ ಭರಿಸಬೇಕಾಗಿದೆ. ಆನ್ ಲೈನ್ ಸೌಲಭ್ಯ ಮತ್ತು ಅದಕ್ಕೆ ತಕ್ಕಂತಿರುವ ಮೊಬೈಲ್ ಪೋನುಗಳ ಸೌಕರ್ಯಗಳು ಬೇಕಾಗಿವೆ. ಮಕ್ಕಳಿಗೆ ಮೊಬೈಲ್ ಕೊಡಬೇಡಿ ಎಂದು ಡಂಗುರ ಸಾರುತ್ತಿದ್ದವರೇ ಇಂದು ದಿನದ 10-12 ಗಂಟೆಗಳ ಕಾಲ ಮೊಬೈಲಿಗೆ ಮುತ್ತಿಡುವಂತೆ ಮಾಡುತ್ತಿದ್ದಾರೆ. ದಿನಬಳಕೆಯ ವಸ್ತುಗಳು ತುಟ್ಟಿಯಾಗಿವೆ. ಕೆಲಸ ಮಾಡುವಂತಿಲ್ಲ. ಕೆಲಸವಿಲ್ಲದೆ ಜೀವನ ನಿರ್ವಹಣೆ ಸಾಧ್ಯವಿಲ್ಲ. ಅನಾಥ ಪ್ರಜ್ಞೆ, ಒಂಟಿತನ, ನಿರುತ್ಸಾಹ, ದುಗುಡ, ಶೀಘ್ರ ಕೋಪ, ಕೌಟುಂಬಿಕ ಅಭದ್ರತೆ, ಮನೆಯವರ ಮೂದಲಿಕೆ, ಮಾನಸಿಕ ಖಿನ್ನತೆ ಮೊದಲಾದ ಕಾರಣಗಳಿಂದ ಹೃದಯಾಘಾತ, ಅಸಹಜ ಸಾವು, ಆತ್ಮಹತ್ಯೆ ಮೊದಲಾದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿವೆ. ಬಡತನ, ಹಸಿವು, ಸ್ವಾಭಿಮಾನದ ಕಾರಣದಿಂದಾಗಿ ನಗರವಾಸಿಗಳ ಬದುಕು ಅಸಹನೀಯವಾಗಿದೆ. ಲಾಕ್ ಡೌನ್ ಎಂಬುದು ರಾಹುಗ್ರಸ್ತ ಗ್ರಹಣವಾಗಿದೆ. ಇನ್ನೂ ಮುಂದುವರಿದರೆ ಬದುಕು ಸಾಗುವುದು ಹೇಗೆ ಎಂಬ ಪ್ರಶ್ನೆ ಕಾಡತೊಡಗಿದೆ. ಆದಷ್ಟೂ ಬೇಗ ಮತ್ತು ವೇಗದಲ್ಲಿ ಸರಕಾರ ಸುಕಲ್ಪಿತ ವ್ಯವಸ್ಥೆಗಳನ್ನು ಜಾರಿಗೆ ತಾರದೇ ಹೋದಲ್ಲಿ ಜನರ ಬದುಕು ಹೇಗೆ ಮತ್ತು ಎತ್ತ ಎಂಬಂಥ ಪ್ರಶ್ನೆಗಳಿಗೆ ಗ್ರಾಸವಾಗುವುದರಲ್ಲಿ ಲವಲೇಶವೂ ಸಂದೇಹವಿಲ್ಲ.


Get In Touch With Us info@kalpa.news Whatsapp: 9481252093

Tags: Corona PositiveCorona VirusElectronic MediaKannada News WebsiteLatest News KannadaLockdownUday Shetty Panjimaruಎಲೆಕ್ಟ್ರಾನಿಕ್ ಮಾಧ್ಯಮಲಾಕ್ ಡೌನ್
Share212Tweet123Send
Previous Post

ಕೋವಿಡ್19 ಕ್ಲಿಷ್ಟಪರಿಸ್ಥಿತಿಯಲ್ಲೂ 1670 ಹೆರಿಗೆ ಮಾಡಿಸಿದ ವೈದ್ಯರನ್ನು ಅಭಿನಂದಿಸಿದ ಶಾಸಕರು

Next Post

ಅಪರಾಧಗಳಿಗೆ ಇತಿಶ್ರೀ ಹಾಡದಿದ್ದಲ್ಲಿ ನಿಮ್ಮ ಜಾಗಕ್ಕೆ ಬೇರೆಯವರನ್ನು ಕರೆಸಬೇಕಾಗುತ್ತದೆ: ಎಸ್‌ಪಿಗೆ ಸಚಿವರ ಎಚ್ಚರಿಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಅಪರಾಧಗಳಿಗೆ ಇತಿಶ್ರೀ ಹಾಡದಿದ್ದಲ್ಲಿ ನಿಮ್ಮ ಜಾಗಕ್ಕೆ ಬೇರೆಯವರನ್ನು ಕರೆಸಬೇಕಾಗುತ್ತದೆ: ಎಸ್‌ಪಿಗೆ ಸಚಿವರ ಎಚ್ಚರಿಕೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಭೀಕರ ಅಪಘಾತ | ರಂಭಾಪುರಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾವು

ಭೀಕರ ಅಪಘಾತ | ರಂಭಾಪುರಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾವು

April 29, 2026
ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

ಶ್ರೀ ರವಿಶಂಕರ ಗುರೂಜಿ ಅವರ 70ನೇ ಜನ್ಮೋತ್ಸವ | ಮೇ 5ರಿಂದ `ಆನಂದೋತ್ಸವ’ ಕಾರ್ಯಕ್ರಮ

April 29, 2026
ಪ್ರಕೃತಿ ವಿಕೋಪದಿಂದ ಹಾನಿ, ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಿ

ಪ್ರಕೃತಿ ವಿಕೋಪದಿಂದ ಹಾನಿ, ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಿ

April 29, 2026
ಕ್ರೈಸ್ಟ್‌ಕಿಂಗ್ | ದ್ವಿತೀಯ ಪಿಯುಸಿ ಮರುಮೌಲ್ಯಮಾಪನ | ಪ್ರಜ್ವಲ್ ಶೆಟ್ಟಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ 

ಕ್ರೈಸ್ಟ್‌ಕಿಂಗ್ | ದ್ವಿತೀಯ ಪಿಯುಸಿ ಮರುಮೌಲ್ಯಮಾಪನ | ಪ್ರಜ್ವಲ್ ಶೆಟ್ಟಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ 

April 29, 2026
ಹುಲಿಕಲ್ ಘಾಟ್ ರಸ್ತೆ ತಡೆಗೋಡೆ ನಿರ್ಮಾಣ ಮಣ್ಣು ಕುಸಿತ ಪ್ರಕರಣ | ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ: ಎಸ್. ಮಧು ಬಂಗಾರಪ್ಪ

ಹುಲಿಕಲ್ ಘಾಟ್ ರಸ್ತೆ ತಡೆಗೋಡೆ ನಿರ್ಮಾಣ ಮಣ್ಣು ಕುಸಿತ ಪ್ರಕರಣ | ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ: ಎಸ್. ಮಧು ಬಂಗಾರಪ್ಪ

April 29, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL