ಕಲ್ಪ ಮೀಡಿಯಾ ಹೌಸ್ | ಸಾಗರ |
ಮಹಿಳೆಯೊರ್ವರು ತನ್ನ ಮಕ್ಕಳೊಂದಿಗೆ ರೈಲು ಬೋಗಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಘಟನೆ ಹಿನ್ನೆಲೆ:
ತಾಲೂಕಿನ ತಾಳಗುಪ್ಪ ರೈಲ್ವೆ ನಿಲ್ದಾಣಕ್ಕೆ ಮೈಸೂರು-ತಾಳಗುಪ್ಪ ರೈಲು ಗಾಡಿ ಇಂದು ಬೆಳಿಗ್ಗೆ ಸುಮಾರು 7 ಗಂಟೆಗೆ ತಲುಪಿದ್ದು, 7:30ರ ಸುಮಾರಿನಲ್ಲಿ ಮಹಿಳೆಯೊರ್ವರು ತನ್ನ ಮಕ್ಕಳೊಂದಿಗೆ ರೈಲು ಬೋಗಿಯ ಬಾಗಿಲನ್ನು ಲಾಕ್ ಮಾಡಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಇದನ್ನು ಗಮನಿಸಿದ ರೈಲ್ವೆ ವಿಭಾಗ ಕರ್ತವ್ಯ ನಿರತ ಕ್ಲೀನಿಂಗ್ ಮತ್ತು ವಾಟರಿಂಗ್ ವಿಭಾಗದ ಕೆ. ರವಿ ಹಾಗೂ ತಾಂತ್ರಿಕ ಜಯಶೀಲಾ ಅವರ ಸಮಯ ಪ್ರೆಜ್ಞೆಯಿಂದ ತಾಯಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ, ತಕ್ಷಣವೇ ರೈಲ್ವೆ ಪೊಲೀಸ್ ಅಧಿಕಾರಿಗಳ ಕಚೇರಿಗೆ ತಾಯಿ ಮತ್ತು ಮಕ್ಕಳ್ಳನ್ನು ಕಳಿಸಿಕೊಟ್ಟಿರುವ ಬಗ್ಗೆ ಮಾಹಿತಿ ದೊರೆತಿದೆ.

ಮಾಹಿತಿ: ಎಸ್. ವಿ. ಓಂಕಾರ, ತಾಳಗುಪ್ಪ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















