ಕಲ್ಪ ಮೀಡಿಯಾ ಹೌಸ್ | ಸಾಗರ |
ಜಲಪಾತ ವೀಕ್ಷಣೆಗೆಂದು ಬೆಂಗಳೂರಿನಿಂದ ಆಗಮಿಸಿದ್ದ ಯುವಕನೋರ್ವ ಜೋಗದ #Joga ಬಳಿ ಕಣ್ಮರೆಯಾಗಿರುವ ಘಟನೆ ನಡೆದಿದ್ದು, ಕಾರ್ಗಲ್ ಠಾಣೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಮೂಲತಃ ಗದಗ ಜಿಲ್ಲೆಯ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ಟೀ ಅಂಗಡಿ ನಡೆಸುತ್ತಿರುವ ಆನಂದ್ (24) ಜಲಪಾತದ ಬಳಿ ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ.
ಜು.15 ರಂದು ಆನಂದ್ ಜೋಗ ಜಲಪಾತಕ್ಕೆ ಆಗಮಿಸಿ. ಯಾತ್ರಿ ನಿವಾಸದದ ಸೀತಾಕಟ್ಟೆ ಬ್ರಿಡ್ಜ್ ಬಳಿಯಿಂದ ಬೇಲಿ ದಾಟಿ, ಜಲಪಾತದ ಬಳಿ ಆಗಮಿಸಿದ್ದ. ನಂತರ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
Also read: ಶ್ರೀವ್ಯಾಸರಾಜ ವಿದ್ಯಾಪೀಠ ನಿರ್ಮಾಣಕ್ಕೆ ಶ್ರೀ ವಿದ್ಯಾಶ್ರೀಶ ಸ್ವಾಮೀಜಿ ಭೂಮಿಪೂಜೆ
ಕಾರ್ಗಲ್ ಠಾಣೆ ಪೊಲೀಸರು ನಾಪತ್ತೆ ದೂರು ದಾಖಲಿಸಿಕೊಂಡು ಸಬ್ ಇನ್ಸ್ಪೆಕ್ಟರ್ ಹೊಳೆಬಸಪ್ಪ ಹೋಳಿ ನೇತೃತ್ವದದಲ್ಲಿ ಕಳೆದ 6 ದಿನಗಳಿಂದಲೂ ಯುವಕನಿಗಾಗಿ ಜಲಪಾತದ ಬಳಿ ಶೋಧ ನಡೆಸುತ್ತಿದ್ದಾರೆ. ಯುವಕ ತಂದಿದ್ದ ಬ್ಯಾಗ್ ಸಿಕ್ಕಿದೆ. ಆದರೆ ಸುಳಿವು ಲಭ್ಯವಾಗಿಲ್ಲ.
ಜೋಗ್ ಜಲಪಾತದ ಬಳಿ ಭಾರೀ ಮಳೆ ಹಾಗೂ ಮಂಜು ಮುಸುಕಿದ ವಾತಾವರಣ ಇರುವುದರಿಂದ ಯುವಕನ ಶೋಧ ಕಾರ್ಯವು ಪೊಲೀಸರಿಗೆ ಕಷ್ಟಕರವಾಗಿ ಪರಿಣಮಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post