ಕಲ್ಪ ಮೀಡಿಯಾ ಹೌಸ್
ಸಾಗರ: ಕರ್ತವ್ಯದ ಮೇರೆಗೆ ತೆರಳಿದ ಆಶಾ ಕಾರ್ಯಕರ್ತೆಯನ್ನು ಕೊರೋನಾ ಸೋಂಕಿತ ವ್ಯಕ್ತಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ಹಿನ್ನೆಲೆ ಆತನ ವಿರುದ್ಧ ಪ್ರಕರಣ ದಾಖಲುಸುವಂತೆ ಶಾಸಕ ಹಾಲಪ್ಪ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪಟ್ಟಣದ ಲೋಹಿಯಾ ನಗರಕ್ಕೆ ಆಶಾ ಕಾರ್ಯಕರ್ತೆಯರು ಕೋವಿಡ್-19 ಕಾರ್ಯಪಡೆಯ ಕರ್ತವ್ಯ ನಿರ್ವಹಿಸಲು ತೆರಳಿದಾಗ ವ್ಯಕ್ತಿಯೋರ್ವ ತನಗೆ ಕೋವಿಡ್ ಬಂದಿರುವ ವಿಚಾರ ನಿಮ್ಮಿಂದಾಗಿ ಅಕ್ಕ ಪಕ್ಕದ ಮನೆಯವರಿಗೆ ತಿಳಿದು ನಮ್ಮನ್ನು ಅನುಮಾನದಿಂದ ನೋಡುತ್ತಿದ್ದಾರೆ. ಇದಕ್ಕೆ ನೀವೇ ಕಾರಣ ಎಂದು ಅವಾಚ್ಯವಾಗಿ ನಿಂದಿಸಿ, ಅನುಚಿತವಾಗಿ ವರ್ತಿಸಿದ ಘಟನೆ ನೆಡೆದಿತ್ತು.

ವಿಷಯ ಗಮನಕ್ಕೆ ಬಂದ ಕೂಡಲೇ ಶಾಸಕ ಹೆಚ್.ಹಾಲಪ್ಪ ಅವರು, ಆಶಾ ಕಾರ್ಯಕರ್ತೆಯರ ಸಭೆ ನಡೆಸಿ, ಕೊರೋನಾ ವಾರಿಯರ್ಸ್‌ಗಳಾಗಿ ನೀವು ಸೋಂಕಿತರ ಬಗ್ಗೆ ಅರಿವಿಲ್ಲದೆ ನೇರ ಸಂಪರ್ಕದಲ್ಲಿರುತ್ತೀರಿ. ನಿಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದೀರಿ. ಇಂತಹ ಸಂಧರ್ಭದಲ್ಲಿ ಕೆಲ ಕಿಡಿಗೇಡಿಗಳು ಈ ರೀತಿ ವರ್ತಿಸುತ್ತಿರುವುದು ಗಮನಕ್ಕೆ ಬಂದಿದೆ ಮುಂದೆ ಈ ರೀತಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಆತ್ಮಸ್ಥೈರ್ಯ ತುಂಬಿ, ಆಶಾ ಕಾರ್ಯಕರ್ತೆಯರಿಗೆ ಫೇಸ್ ಶೀಲ್ಡ್ ಮಾಸ್ಕ್ ವಿತರಿಸಿದರು.

ಮಧುರಾ ಶಿವಾನಂದ, ವಿ. ಮಹೇಶ್, ಗಣೇಶ್ ಪ್ರಸಾದ್, ಸಂತೋಷ್ ಶೇಟ್, ಮಾ.ಸ ನಂಜುಂಡಸ್ವಾಮಿ, ಮೈತ್ರಿ ಪಾಟೀಲ್, ಪ್ರೇಮಾ ಕಿರಣ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















