ಕಲ್ಪ ಮೀಡಿಯಾ ಹೌಸ್
ಸಾಗರ: ಕೋವಿಡ್-19 ಸಂದರ್ಭದಲ್ಲಿ ನಗರದಲ್ಲಿ ನಿರ್ಗತಿಕರಿಗೆ, ಬಡಕುಟುಂಬಗಳಿಗೆ ಹಾಗೂ ಸೋಂಕಿತರ ಮನೆಗೆ ದಿನಸಿ ಸಾಮಾಗ್ರಿಗಳು ಮತ್ತು ಔಷಧಿ ನೀಡುವ ಮೂಲಕ ಜನರಿಗೆ ನೆರವಾಗಲು ಸಜ್ಜಾಗಿರುವ ಕೋವಿಡ್ ಸಹಾಯ ಪಡೆಗೆ ಶಾಸಕ ಹರತಾಳು ಹಾಲಪ್ಪ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ಕೊರೋನಾ ಸಂಕಷ್ಟ ಕಾಲದಲ್ಲಿ ಸ್ಪಂದಿಸುವುದು ಪ್ರತಿಯೋರ್ವರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ನಗರ ಬಿಜೆಪಿ, ತನ್ನ ಸದಸ್ಯರೆಲ್ಲರ ಸಹಕಾರದೊಂದಿಗೆ ಕೋವಿಡ್ ಸಹಾಯಪಡೆಯನ್ನು ಆರಂಭಿಸಿದೆ. ಇದಲ್ಲದೆ ಕೊರೋನಾ ಸೋಂಕಿತರು ಹಾಗೂ ಅವರ ಸೇವೆಯಲ್ಲಿರುವರಿಗೆ ಅವಶ್ಯಕತೆಗಳಿಗೆ ಸ್ಪಂದಿಸಲಿದೆ ಎಂದರು.
ಫೆಸ್ ಶೀಲ್ಡ್, ಮಾಸ್ಕ್ ವಿತರಣೆ:
ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ, ಪತ್ರಕರ್ತರಿಗೆ, ಆರೋಗ್ಯ ಸಿಬ್ಬಂದಿಗಳಿಗೆ ಫೇಸ್ ಶೀಲ್ಡ್ ಹಾಗೂ ಮಾಸ್ಕ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷೆ ಮಧುರ ಶಿವಾನಂದ, ನಗರಸಭೆ ಉಪಾಧ್ಯಕ್ಷ ವಿ ಮಹೇಶ್, ನಗರಸಭಾ ಸದಸ್ಯ ಗಣೇಶ್ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ. ತುಕಾರಂ, ವಿನಾಯಕ್ ಹೆಗ್ಡೆ, ಸತೀಶ್ ಮೊಗವೀರ ಇನ್ನಿತರರು ಉಪಸ್ಥಿತರಿದ್ದರು.
ಸಾಗರ ನಗರ ಬಿಜೆಪಿ ಸಹಾಯ ಪಡೆಯ ಸಂಪರ್ಕ ಸಂಖ್ಯೆ ಮೊ:9742342370ಗೆ ಕರೆ ಮಾಡಿ ಸಹಾಯ ಪಡೆಯಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post