ಕಲ್ಪ ಮೀಡಿಯಾ ಹೌಸ್ | ಸಾಗರ |
ಹಿರೇಬಿಲಗುಂಜಿ ಗ್ರಾ.ಪಂ, ಸಂಪಳ್ಳಿ ಕೋಟೆಕೊಪ್ಪ ಗ್ರಾಮದ ಪ್ರೇಮ ಎಂಬುವವರ ಸ್ವಾಧೀನದಲ್ಲಿದ್ದ ಜಮೀನನ್ನು ರಾಜಕೀಯ ಪ್ರಭಾವವಿರುವ ಪುಡಾರಿಗಳು, ದೌರ್ಜನ್ಯವೆಸಗಿರುವುದರಿಂದ ಮನನೊಂದು ವಿಷ ಸೇವಿಸಿ ಚಿಕಿತ್ಸೆಗಾಗಿ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರಿಗೆ ಕಿರುಕುಳ ಹಾಗೂ ದೌರ್ಜನ್ಯ ಮಾಡಿರುವುದನ್ನು ಮಾಜಿ ಶಾಸಕ ಹಾಲಪ್ಪ ಖಂಡಿಸಿದ್ದಾರೆ.
ಮಾಜಿ ಸಚಿವ ಹೆಚ್. ಹಾಲಪ್ಪ ನವರ ನೇತೃತ್ವದಲ್ಲಿ, ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಿ, ಸಂತ್ರಸ್ತ ಮಹಿಳೆ ಹಾಗೂ ಕುಟುಂಬಸ್ಥರಿಗೆ ಧೈರ್ಯ ತುಂಬಿ, ನಂತರ ಆಸ್ಪತ್ರೆಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಛೇರಿಗೆ ತೆರಳಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಸಂತ್ರಸ್ತ ಕುಟುಂಬಸ್ಥರಿಗೆ ರಕ್ಷಣೆ ಒದಗಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.












Discussion about this post