ಕಲ್ಪ ಮೀಡಿಯಾ ಹೌಸ್ | ಸಾಗರ |
ಕ್ಯಾನ್ಸರ್ ಅನ್ನು ಮುಂಚಿತವಾಗಿಯೇ ಪರೀಕ್ಷಿಸಿಕೊಂಡು ನಿಯಮಿತವಾಗಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ತಿಳಿದುಕೊಂಡರೆ ಗುಣ ಮಾಡುವ ಸಾಧ್ಯತೆಗಳು ಹೆಚ್ಚಿರುತ್ತದೆ ಎಂದು ರಾಜನಂದಿನಿ ಹಾಸ್ಪಿಟಲ್ ಮುಖ್ಯಸ್ಥರಾದ ಡಾ. ರಾಜನಂದಿನಿ ತಿಳಿಸಿದರು.
ಅವರು ಭಾನುವಾರ ಬೆಳಿಗ್ಗೆ ಸಾಗರದ ಶ್ವೇತಾಂಬರ ಜೈನ ಮಂದಿರ, ಗಣಪತಿ ದೇವಸ್ಥಾನದಲ್ಲಿ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಆರೋಗ್ಯ ಭಾರತಿ ಶಿವಮೊಗ್ಗ, ಮಥುರ ರಜತೋತ್ಸವ ಸಮಿತಿ ಶಿವಮೊಗ್ಗ, ಮತ್ತು ಸಾಗರದ ಗಣಾಧೀಶ್ವರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ತೀರ್ಥಹಳ್ಳಿ ಇವರ ಸಹಕಾರದಲ್ಲಿ ಆಯೋಜಿಸಿದ್ದ ಸಾಮಾನ್ಯ ಆರೋಗ್ಯ ಹಾಗೂ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಮಾನ್ಯವಾಗಿ ಯಾವುದೇ ಖಾಯಿಲೆ ಇರಲಿ ಅದರ ಸುಳಿವು ಸ್ವಲ್ಪ ಕೂಡಾ ಗೊತ್ತಾದರೂ ವೈಧ್ಯರ ಬಳಿ ಹೋಗಿ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ರೋಗಿಗಳಿಗೆ ಒಂದೊಂದು ಸಲಹೆಯನ್ನುಕೊಡುತ್ತ ರೋಗಿಗಳ ಮನಸ್ಸನ್ನು ಕೆಡಿಸುತ್ತಾರೆ. ಯಾವ ರೋಗಕ್ಕೆ ಯಾವ ಮದ್ದು, ಯಾವ ಮದ್ದು ನೀಡಿದರೆ ಆ ರೋಗಿಯ ದೇಹಕ್ಕೆ ಹೊಂದಿಕೊಳ್ಳುತ್ತದೆ ಎಂದು ವೈಧ್ಯರು ನಿರ್ಣಯಿಸಿ ಚಿಕಿತ್ಸೆ ನೀಡುತ್ತಾರೆ ಇದನ್ನು ಎಲ್ಲಾ ರೋಗಿಗಳು ಪಾಲಿಸಬೇಕು ಎಂದು ತಿಳಿಸಿದರು.
Also read: ಮೆಗ್ಗಾನ್ ಆವರಣದಲ್ಲಿ ಮಾಜಿ ಸಿಎಂ ಬಂಗಾರಪ್ಪ ಪುತ್ಥಳಿ ಸ್ಥಾಪಿಸಿ | ಕೆಪಿಸಿಸಿ ಸಂಯೋಜಕ ಮೋಹನ್ ಆಗ್ರಹ
ಮಂಗಳೂರಿನ ಎಮ್.ಐ.ಓ ಆಸ್ಪತ್ರೆ ಉತ್ತಮ ಕಾರ್ಯಮಡುತ್ತಿದ್ದು ಜನರಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುತ್ತಿದ್ದು ಇದು ಪ್ರತೀ ಹಳ್ಳಿ ಹಳಿಗೂ ತಲುಪಬೇಕು ಎಂದು ಸಲಹೆ ನೀಡಿದರು.
ಕ್ಯಾನ್ಸರ್ ಎಂದರೆ ಭಯಪಡುವ ಅವಶ್ಯಕತೆ ಇಲ್ಲ ಈಗ ಇದು ಗುಣಪಡಿಸ ಬಹುದಾದ ಖಾಯಿಲೆ ಮತ್ತು ಹಿಂದೆ ಕ್ಯಾನ್ಸರ್ ಇದ್ದವರನ್ನು ಅಸ್ಪೃಶ್ಯರಂತೆ ಕಾಣುತ್ತಿದ್ದರು ಆದರೆ ಈಗ ಆ ಪರಿಸ್ಥಿತಿ ಇಲ್ಲ ಇದೋಂದು ಸಾಮಾನ್ಯ ಖಾಯಿಲೆ ಎಂದು ಭಾವಿಸಬೇಕು. 40ವರ್ಷ ಮೇಲ್ಪಟ್ಟವರು ಆಗಾಗ್ಗೆ ಆರೋಗ್ಯದ ತಪಾಸಣೆ ಮಾಡಿಸಿಕೊಂಡರೆ ಉತ್ತಮ ಎಂದು ಸಲಹೆ ನೀಡಿದರು.
ಮಂಗಳೂರು ಇನ್ಸಿ÷್ಟಟ್ಯೂಟ್ ಆಫ್ ಅಂಕಾಲಜಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ತೀರ್ಥಹಳ್ಳಿ ಇ.ಏನ್.ಟಿ. ಹೆಡ್ & ನೆಕ್ ಆಂಕೋ ಸರ್ಜನ್ ಡಾ. ದಿವ್ಯಜೋತಿ ಎಂ.ಎಸ್., ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತ ಬಾಯಿಯ ಕ್ಯಾನ್ಸರ್ ಬರುವ ಕಾರಣ ನಿವಾರಣೋಪಾಯ ಹಾಗೂ ಚಿಕಿತ್ಸಾ ಕ್ರಮಗಳನ್ನು ಸವಿಸ್ತಾರವಾಗಿ ಜನರಿಗೆ ತಿಳಿಸುತ್ತ ಹೆಚ್ಚಾಗಿ ತಂಬಾಕು ಮತ್ತು ಗುಟ್ಕ ಸೇವನೆಯಿಂದ ಕ್ಯಾನ್ಸರ್ ವೇಗವಾಗಿ ಬೆಳೆಯುತ್ತಿದೆ ಎಂದರು.
ಸಾಗರದ ನಿರಾಮಯ ಚಿಕಿತ್ಸಾಲಯದ ವೈದ್ಯೆ ಡಾ. ಮೈಥಿಲಿ.ಸಿ ಇವರು ಮಾತನಾಡುತ್ತ ಆಯುರ್ವೇದದಲ್ಲಿ ಕ್ಯಾನ್ಸರ್ ತಡೆಯಲು ಇರುವಂತಹ ನಿಯಮಗಳು, ಬಾರದೆ ಇರಲು ಪ್ರತಿ ವರ್ಷ ಮಾಡಿಕೊಳ್ಳಬೇಕಾಗಿರುವಂತಹ ಋತು ಶೋದನವಾದ ಪಂಚ ಕರ್ಮದ ಬಗ್ಗೆಯೂ ಹಾಗೂ ಕಿಮೋಥೆರಪಿ ತೆಗೆದುಕೊಳ್ಳುತ್ತಿರುವ ರೋಗಿಗಳಿಗೆ ಅದರ ಶಮನವನ್ನು ಆಯುರ್ವೇದದ ಮೂಲಕ ಹೇಗೆ ನಿವಾರಿಸಿಕೊಳ್ಳಬಹುದೆಂದು ತಿಳಿಸಿದರು.
ಶ್ರೀ ಕೃಷ್ಣ ಯೋಗ ಮಂದಿರ ಶಿವಮೊಗ್ಗ ಕಾರ್ಯಕರ್ತರಾದ ಶ್ರೀಮತಿ ರಾಜಶ್ರೀ ಅರ್ಚಕ್ ಇವರು ಯೋಗದಿಂದ ಹೇಗೆ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು ಹಾಗೂ ಕ್ಯಾನ್ಸರ್ ಬಂದ ನಂತರ ಧೈರ್ಯವನ್ನು ಕಾಪಾಡಿಕೊಳ್ಳಲು ಯೋಗ ಹೇಗೆ ಸಹಾಯ ಮಾಡುತ್ತದೆ ಎಂದು ಸವಿಸ್ತಾರವಾಗಿ ಹೇಳಿದರು.
ಸಾಗರ ತಾಲೂಕು ಆರೋಗ್ಯ ಭಾರತಿ ಅಧ್ಯಕ್ಷರಾದ ಶ್ರೀ ಸತ್ಯನಾರಾಯಣ ಎಂ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಜನರು ದುಶ್ಚಟಗಳಿಂದ ದೂರವಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅ.ನಾ. ವಿಜಯೇಂದ್ರ ರಾವ್ ಎಲ್ರನ್ನೂ ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಸಿದ್ದಾಪುರದ ಎಸ್.ಡಿ.ಎ.ಸಿ ಕಾಲೇಜಿನ ಪಂಚಕರ್ಮ ಅಸಿಸ್ಟೆಂಟ್ ಪ್ರೊಫೆಸರ್ ಡಾ. ರಾಧಾ ಚೇತನ್ ಇವರು ಉಪಸ್ಥಿತರಿದ್ದರು. ಗಣಾದೀಶ್ವಾರ ಸಂಘದ ಪರವಾಗಿ ಅಮಿತ್ ಬನ್ಸಾಲಿ, ಮಂಜಣ್ಣ ಅಧ್ಯಕ್ಷರು ಇವರು ಉಪಸ್ಥಿತರಿದ್ದರು.
ಅದ್ವೈತ ಆಯುರ್ವೇದ ಚಿಕಿತ್ಸಾಲಯ ಶಿವಮೊಗ್ಗ ಇದರ ವೈಧ್ಯರಾದ ಡಾಕ್ಟರ್ ಪಲ್ಲವಿ. ಕೆ.ಎಸ್.ರವರು ಸಭಿಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಭಾವತಿ ಪ್ರಾರ್ಥಿಸಿದರು. ಆರೋಗ್ಯ ಭಾರತಿ ಶಿವಮೊಗ್ಗ ವಿಭಾಗ ಸಂಯೋಜಕ ಶ್ರೀಧರ್ ಇವರು ವಂದನಾರ್ಪಣೆಯನ್ನು ಮಾಡಿದರು. ವನಜ ಶ್ರೀನಿವಾಸ್ ಶಿವಮೊಗ್ಗ ಇವರು ನಿರೂಪಣೆ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post