ಕಲ್ಪ ಮೀಡಿಯಾ ಹೌಸ್ | ಸಾಗರ |
ಪಟ್ಟಣದ ನಾಗರಿಕರ ಬಹಳ ವರ್ಷಗಳ ಬೇಡಿಕೆಯಾಗಿದ್ದ ಚತುಷ್ಪಥ ರಸ್ತೆಯ(ಮಾರ್ಕೆಟ್ ರಸ್ತೆ) ಕಾಮಗಾರಿ ವೇಗ ಪಡೆದುಕೊಂಡಿದ್ದು, ಶಾಸಕ ಎಚ್. ಹಾಲಪ್ಪ MLA Halappa ಅವರು ಕಾಮಗಾರಿಯನ್ನು ವೀಕ್ಷಿಸಿದರು.
ಈ ವೇಳೆ ಮಾತನಾಡಿದ ಅವರು, ನಮ್ಮೂರಿನ ಜನರ ಬಹಳ ವರ್ಷಗಳ ಬೇಡಿಕೆಯಾಗಿದ್ದ ಹಾಗೂ ಅಟಲ್ ಬಿಹಾರಿ ವಾಜಪೇಯಿ ಯವರ ಕನಸಿನ ಯೋಜನೆಯಾದ ಚತುಷ್ಪಥ ರಸ್ತೆಯನ್ನು ಸಾಗರದಲ್ಲಿ ಸಾಕಾರಗೊಳಿಸುವ ಸಲುವಾಗಿ ಈ ಯೋಜನೆಯ ಕಾಮಗಾರಿಯನ್ನು ಸಮರ್ಪಕವಾಗಿ ಹಾಗೂ ವೇಗವಾಗಿ ನಡೆಸಲಾಗುತ್ತಿದೆ. ಸದ್ಯ ರಸ್ತೆ ವಿಭಜಕ ಹಾಗೂ ಅಲಂಕಾರಿಕ ದೀಪಗಳನ್ನು ಅಳಡಿಸಲಾಗುತ್ತಿದ್ದು, ಶೀಘ್ರ ಲೋಕಾರ್ಪಣೆ ಮಾಡಲು ಚಿಂತಿಸಲಾಗುತ್ತಿದೆ ಎಂದರು.
Also read: ಸ್ವ ನಿಧಿ ಮಹೋತ್ಸವಕ್ಕೆ ಮೇಯರ್ ಶಿವಕುಮಾರ್ ಚಾಲನೆ
ಈ ವೇಳೆ ನಗರಸಭೆ ಅಧ್ಯಕ್ಷರು, ಸದಸ್ಯರು, ಪೌರಾಯುಕ್ತರು, ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post