ಕಲ್ಪ ಮೀಡಿಯಾ ಹೌಸ್ | ಸಾಗರ |
ಗೆಲುವು ಬಂದಾಗ ಎಲ್ಲವೂ ನಾನು, ನನ್ನಿಂದ ಎನ್ನುವ ಮನುಷ್ಯ ಸೋತಾಗ ಹಣೆ ಬರಹ, ವಿಧಿ ಲಿಖಿತ ಎಂಬ ಶಬ್ದ ಬಳಸುತ್ತಾನೆ ಆದರೆ ನಿಜವಾಗಿಯೂ ಗೆಲುವು ಮತ್ತು ಸೋಲು ಎಲ್ಲವೂ ಭಗವಂತನ ಇಚ್ಚೆ. ಗೆದ್ದಾಗಲೂ ಅವನನ್ನೇ ಸ್ಮರಿಸಬೇಕು ಇನ್ನು ಸೋತಾಗ ಹೇಗೂ ಭಗವಂತನ ನೆನಪು ಮಾಡಲೇ ಬೇಕು ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು #Raghaveshwara Shri ಹೇಳಿದರು.
ಸಾಗರದ ಶ್ರೀ ರಾಘವೇಶ್ವರ ಸಭಾ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ನವರಾತ್ರ ನಮಸ್ಯಾದ 9 ನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಅವರು ನುಡಿದರು.

ಮರೆಯಬೇಕಾಗಿರುವುದನ್ನು ಮರೆಸುವುದು ಹಾಗೂ ಮರೆಯಬಾರದನ್ನು ಮೆರೆಸುವುದು ದೇವಿಯ ಕೈಯಲ್ಲಿದೆ. ದೇವಿಯರ ಆಶೀರ್ವಾದ ನಿತ್ಯ ಇದ್ದರೆ ಪ್ರಕೃತಿಯಲ್ಲಿಯ ಸಹಜ ಬದುಕು ನಮ್ಮದಾಗಲಿದೆ ಎಂದರು.

ಇದಕ್ಕೂ ಮುನ್ನ ನವರಾತ್ರ ನಮಸ್ಯಾ ಸಮಿತಿಯಿಂದ ಕೊಡ ಮಾಡಿದ ಸಮಾಜ ಗೌರವವನ್ನು ಸಾರಸ್ವತ ಸಮಾಜ, ಮಾಧ್ವ ಸಮಾಜ,ಸ್ಮಾರ್ಥ ಸಮಾಜ, ಸವಿತಾ ಸಮಾಜ ,ಭೋವಿ ಸಮಾಜದ ಪರವಾಗಿ ಅಧ್ಯಕ್ಷರಾದ ಅರುಣ್ ಕುಮಾರ್ ಬಸ್ರೂರು, ವೆಂಕಟೇಶ್ ಕಟ್ಟಿ, ವಿನಾಯಕ ಜೋಷಿ, ರಂಜಿತ್‍ಕುಮಾರ್, ವೆಂಕಟೇಶ್ ಮತ್ತು ಪೌರ ಕಾರ್ಮಿಕರ ಪರವಾಗಿ ಸಂಘದ ಅಧ್ಯಕ್ಷ ನಾಗರಾಜ್ ಗೌರವ ಸ್ವೀಕರಿಸಿದರು. ಮಾತೃತ್ವಂ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಹಾರೆಕೆರೆ ನಾರಾಯಣ ಭಟ್, ಬಿ.ಕೆ. ಲಕ್ಷ್ಮಿನಾರಾಯಣ ಕೌಲಕೈ, ಮಧು ಶಿರೂಮನೆ, ಗುರುದೊಂಬೆ, ಜಯಂತ್ ಖಂಡಿಕಾ, ಸತೀಶ್ ಭಟ್, ಸೀತಾರಾಂಭಟ್, ಸುಬ್ರಮಣ್ಯ ಐಸಿರಿ, ಎಂ.ಜಿ.ರಾಮಚಂದ್ರ, ರಮೇಶ್ ಹೆಗಡೆ ಗುಂಡೂಮನೆ, ಶ್ರೀನಾಥಸಾರಂಗ ಮತ್ತಿತರರು ಇದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















Discussion about this post