ಕಲ್ಪ ಮೀಡಿಯಾ ಹೌಸ್
ಸಾಗರ: 7ನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ತಾಲೂಕು ಗಾಂಧಿ ನಗರದ ನಿಸರ್ಗ ಯೋಗ ಕೇಂದ್ರದಿಂದ ಆಚರಿಸಲಾಯಿತು.
ಪ್ರಸ್ತುತ ಲಾಕ್ಡೌನ್ ಹಾಗೂ ಕೊರೋನಾ ಸಂಕಷ್ಟ ಕಾಲದಲ್ಲಿ ಈಗಾಗಲೇ ಎರಡು ತಿಂಗಳಿನಿಂದ ಯೋಗಾಸಕ್ತರಿಗೆ ಮಾನಸಿಕ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ಆನ್ಲೈನ್ ತರಗತಿಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ನಿಸರ್ಗ ಯೋಗ ಕೇಂದ್ರದ ಕಾರ್ಯವು ಶ್ಲಾಘನೀಯ.
ಮಾಧ್ಯಮ ಮತ್ತು ಸಮಯದ ದುರುಪಯೋಗ ಮಾಡಿಕೊಳ್ಳುತ್ತಿರುವ ಈ ಆಧುನಿಕ ಬದುಕಿನ ಸಂದರ್ಭದಲ್ಲಿ ಅಂತರ್ಜಾಲವನ್ನು ಬದ್ಧತೆಯಿಂದ ಯೋಗ್ಯ ಕ್ರಮದಲ್ಲಿ ಉಪಯೋಗಿಸಿಕೊಳ್ಳುತ್ತಿರುವ ಯೋಗ ಕೇಂದ್ರದವರು ಅತ್ಯುತ್ತಮ ಪ್ರಯತ್ನವನ್ನು ನಡೆಸಿಕೊಂಡು ಬರುತ್ತಿದ್ದು, ಯೋಗ ದಿನದ ವಿಶೇಷತೆಯ ಸಂದರ್ಭದಲ್ಲಿ ನಿಸರ್ಗ ಯೋಗ ತಂಡವು 21 ಬಾರಿ ಸೂರ್ಯ ನಮಸ್ಕಾರ ಮಾಡಿದರು. 21-21-21 ವಿಶೇಷತೆಯಲ್ಲಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕಿ ಜ್ಯೋತಿ ಶಶಿಕಾಂತ್ ಮಾತನಾಡಿ, ಯೋಗ ನಿರ್ದಿಷ್ಟ ಅವಧಿಗೆ ಮಾತ್ರ ಸೀಮಿತವಲ್ಲ. ಯೋಗ ನಿರಂತರ ಪ್ರಕ್ರಿಯೆ. ನಾವು ಯೋಗ, ಪ್ರಾಣಾಯಾಮ, ಧ್ಯಾನ ಇವುಗಳನ್ನು ನಮ್ಮ ಜೀವನದಲ್ಲಿ ದಿನಚರಿಯನ್ನು ಮಾಡಿಕೊಳ್ಳುವುದರ ಮೂಲಕ ನಮ್ಮಲ್ಲಿ ಆತ್ಮವಿಶ್ವಾಸ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಯೋಗ ಯುಕ್ತ-ರೋಗಮುಕ್ತ ದೇಶ ವನ್ನು ಕಟ್ಟೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಿಸರ್ಗ ಯೋಗ ಕೇಂದ್ರದ ಸದಸ್ಯರು ಮತ್ತಿತರರು ಇದ್ದರು.
ವರದಿ: ಅಜಿತ್ ಗೌಡ ಬಡೇನಾಕೊಪ್ಪ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post