ಕಲ್ಪ ಮೀಡಿಯಾ ಹೌಸ್ | ಸಾಗರ |
ಶಾಸಕರಾದ ಹೆಚ್. ಹಾಲಪ್ಪ ಅವರು ಬೆಂಗಳೂರಿನಲ್ಲಿ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಬೇಟಿಯಾಗಿ, ತ್ಯಾಗರ್ತಿಯಲ್ಲಿ ನಿರ್ಮಿಸುತ್ತಿರುವ ಈಡಿಗ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಹೆಚ್ಚುವರಿ ಅನುದಾನ ನೀಡುವಂತೆ ಹಾಗೂ ಸಾಗರದಲ್ಲಿ ನಾರಾಯಣ ಗುರು ವಸತಿ ಶಾಲೆ ಪ್ರಾರಂಭಿಸುವ ಕುರಿತು ಚರ್ಚಿಸಿ, ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚೇತನ್ ರಾಜ್ ಕಣ್ಣೂರು, ಕೆ.ಎಸ್ ಪ್ರಶಾಂತ್, ಮಿಕ್ಸಿ ಮಂಜು, ಸಂಪಳ್ಳಿ ಶ್ರೀಧರ್, ಯೋಗೀಶ್ ಮತ್ತಿತರರು ಉಪಸ್ಥಿತರಿದ್ದರು.











Discussion about this post