ಕಲ್ಪ ಮೀಡಿಯಾ ಹೌಸ್
ಸಾಗರ: ಆನಂದಪುರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಮಹಾಸಂಸ್ಥಾನ ಮಠದಲ್ಲಿ ಅರಸೀಕೆರೆಯ ಹಾರ್ನಳ್ಳಿಯ ಕೋಡಿ ಮಠದ ಜಗದ್ಗುರುಗಳಾದ ಶಿವಾನಂದ ರಾಜ ದೇಶಿಕೇಂದ್ರ ಶ್ರೀಗಳನ್ನು ಸಂಸದ ಬಿ.ವೈ. ರಾಘವೇಂದ್ರ ಭೇಟಿಯಾಗಿ ಆಶೀರ್ವಾದ ಪಡೆದರು.


ಈ ಸಂದರ್ಭದಲ್ಲಿ ಮುರುಘಾ ಮಠದ ಶ್ರೀಗಳು, ಕೋಣಂದೂರು ಬೃಹನ್ಮಠದ ಮಠದ ಶ್ರೀಗಳು, ಜಡೆ ಮಠದ ಶ್ರೀಗಳು, ಹಾರನಹಳ್ಳಿ ಚೌಕಿಮಠದ ಶ್ರೀಗಳು, ಮೂಲೆಗದ್ದೆ ಮಠದ ಶ್ರೀಗಳು ಹಾಗೂ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಎಸ್. ಜ್ಯೋತಿಪ್ರಕಾಶ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಎ. ವಿ. ಮಲ್ಲಿಕಾರ್ಜುನ್, ಎಮ್‌ಸಿಎ ನಿರ್ದೇಶಕ ಹೆಚ್. ಆರ್. ತೀರ್ಥೇಶ್ ಉಪಸ್ಥಿತರಿದ್ದರು.



ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















