ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ಈಗಾಗಲೇ ಕೊರೆಸಿರುವ ಬೋರ್’ವೆಲ್’ಗಳಿಗೆ ತತಕ್ಷಣವೇ ಮೋಟಾರ್ ಅಳವಡಿಸಿ ಎಂದು ಶಾಸಕ ಎಚ್. ಹಾಲಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಟಾಸ್ಕ್ ಫೋರ್ಸ್ ಹಾಗೂ ಗ್ರಾಮ ಪಂಚಾಯ್ತಿ ಅನುದಾನದಲ್ಲಿ ಅನೇಕ ಕಡೆ ಬೋರ್’ವೆಲ್ ಕೊರೆಸಲಾಗಿದೆ. ಆದರೆ, ಮೋಟಾರ್ ಅಳವಡಿಸದೇ ಖಾಲಿ ಬಿಡಲಾಗಿದೆ. ಶೀಘ್ರದಲ್ಲೇ ಮೋಟರ್ ಅಳವಡಿಸಿ ಗ್ರಾಮಗಳಿಗೆ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಶಿವಮೊಗ್ಗದ ಈಡಿಗ ಭವನದಲ್ಲಿ ಧೀರ ದೀವರು ಬಳಗ, ಮಲೆನಾಡು ದೀವರು ಕ್ಷೇಮಾಭಿವೃದ್ಧಿ ಸಮಿತಿಯ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಭೂಮಣ್ಣಿ ಬುಟ್ಟಿ ಚಿತ್ತಾರ ಸ್ಪರ್ಧೆ-2020 ಹಾಗೂ ಚಿತ್ತಾರಗಿತ್ತಿ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ, ಕಾರ್ಯಕ್ರಮ ಉದ್ದೇಶಿಸಿ ಹಾಲಪ್ಪ ಮಾತನಾಡಿದರು.
ಸಾಗರದ ಎಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು, ಉಪವಿಭಾಗೀಯ ಆಸ್ಪತ್ರೆ ಹಾಗೂ ತಾಯಿ ಮಗು ಆಸ್ಪತ್ರೆಯ ಮೂಲಭೂತ ಸೌಕರ್ಯಗಳ ಸಮಸ್ಯೆ ಬಗ್ಗೆ ಚರ್ಚಿಸಿದರು.
ಶಾಸಕರ ಪ್ರಯತ್ನದಿಂದ ಕಾನಗೋಡು ರಸ್ತೆ ಅಭಿವೃದ್ಧಿ ಪೂರ್ಣ
ಶಾಸಕ ಹಾಲಪ್ಪ ಅವರ ವಿಶೇಷ ಪ್ರಯತ್ನದಿಂದಾಗಿ ತಾಲೂಕಿನ ಮಾಲ್ವೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 25 ಲಕ್ಷ ರೂ. ವೆಚ್ಚದ ಕಾನುಗೋಡು ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post