ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾದ ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡ ಅವರ ಅಕಾಲಿಕ ನಿಧನಕ್ಕೆ ಎಂಎಸ್’ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಸಂತಾಪ ಸೂಚಿಸಿದ್ದಾರೆ.
ಈ ಕುರಿತಂತೆ ಶೋಕ ಸಂದೇಶ ನೀಡಿರುವ ಅವರು, ಅತ್ಯಂತ ಮೃದು ಸ್ವಭಾವದ ಧರ್ಮೇಗೌಡರು ಅಭಿವೃದ್ಧಿ ಕಾರ್ಯಗಳ ನಿರಂತರವಾಗಿ ನಡೆಸುತ್ತಾ, ಸದಾ ಜನಸೇವೆಯಲ್ಲಿ ತೊಡಗಿಕೊಂಡ ನಾಯಕರಾಗಿದ್ದರು. ತೀರಾ ಸೌಮ್ಯ ಸ್ವಭಾವದ ಅವರ ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ಬಂದಿದ್ದು ಆಘಾತವನ್ನುಂಟು ಮಾಡಿದೆ ಎಂದು ಕಂಬನಿ ಮಿಡಿದಿದ್ದಾರೆ.
ಇವರ ನಿಧನ ಕಡೂರು ಮಾತ್ರವಲ್ಲ ಇಡಿಯ ರಾಜ್ಯಕ್ಕೇ ತುಂಬಲಾರದ ನಷ್ಟ ಉಂಟು ಮಾಡಿದೆ. ಅಭಿಮಾನಿಗಳಿಗೆ, ಪಕ್ಷದ ಕಾರ್ಯಕರ್ತರಿಗೆ ಪ್ರಮುಖವಾಗಿ ಧರ್ಮೇಗೌಡರ ಕುಟುಂಬಸ್ಥರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post