ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ಮಹಾನ್ ಸಂತ ವಿವೇಕಾನಂದರು ಹಾಗೂ ಅವರ ವಿಚಾರಧಾರೆಗಳು 158 ವರ್ಷದ ನಂತರವೂ ಸಹ ಪ್ರಸ್ತುತವಾಗಿದೆ ಎಂದರೆ ಅದರ ಹಿಂದಿನ ಶ್ರೇಷ್ಠತೆ ತಿಳಿಯುತ್ತದೆ ಎಂದು ಎಬಿವಿಪಿ ತಾಲೂಕು ಅಧ್ಯಕ್ಷ ಡಾ.ಶ್ರೀಪಾದ ಹೆಗಡೆ ಅಭಿಪ್ರಾಯಪಟ್ಟರು.
ಸ್ವಾಮಿ ವಿವೇಕಾನಂದರ 158ನೆಯ ಜಯಂತಿ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಡಿ ದೇಶದ ಇತಿಹಾಸ ನೋಡಿದಾಗ ವಿವೇಕಾನಂದರ ವಿಭಿನ್ನವಾಗಿ ನಿಲ್ಲುವ ನಾಯಕ. ಇಡಿಯ ಸಮಾಜವನ್ನು ಒಟ್ಟಾಗಿ ಕೊಂಡೊಯ್ದ ನಾಯಕರಾಗಿದ್ದ ಅವರು, ದೇಶದಲ್ಲಿ ಆಧ್ಯಾತ್ಮಿಕವಾಗಿ ಎಲ್ಲರನ್ನೂ ಒಂದಾಗಿಸಲು ಯತ್ನಿಸಿದ ದಾರ್ಶನಿಕ. ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ಗ್ರಾಮಕ್ಕೆ ತೆರಳಿದರೂ ವಿವೇಕಾನಂದರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರು ಆದರ್ಶಪ್ರಾಯರಾಗಿಯೇ ಇದ್ದಾರೆ ಎಂದು ಅಭಿಪ್ರಾಯಪಟ್ಟರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಾಗರ ವತಿಯಿಂದ ಸಾಗರದ ಕಾಲೇಜುಗಳಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಿಸಲಾಯಿತು.
ಉಪಾಧ್ಯಕ್ಷರಾದ ವಿಷ್ಣು ಶರ್ಮಾಹಾಗೂ ಇನ್ನಿತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post