ಕಲ್ಪ ಮೀಡಿಯಾ ಹೌಸ್ | ಸಾಗರ |
ಸಾಗರದ ಗಣಪತಿ ಜಾತ್ರೆಗೆ ಆಗಮಿಸಿದ್ದ ವೃದ್ಧೆಯ ಚಿನ್ನದ ಸರ ಕಳ್ಳತನವಾಗಿರುವ ಘಟನೆ ನಡೆದಿದ್ದು, ಸಾಗರ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸೈದೂರಿನ ಚಂದ್ರಮ್ಮ (70) ಚಿನ್ನದ ಸರ ಕಳೆದುಕೊಂಡಿರುವ ಮಹಿಳೆ. ಗಣಪತಿ ಜಾತ್ರೆಯ ತೇರಿನ ಬಳಿ ಪ್ರಸಾದ ಸ್ವೀಕರಿಸುತ್ತಿದ್ದಾಗ ಯಾರೋ ತನ್ನ ಕುತ್ತಿಗೆಯಲ್ಲಿದ್ದ ಸರ ಅಪಹರಿಸಿದ್ದಾರೆ ಎಂದು ಇವರು ತಿಳಿಸಿದ್ದಾರೆ.
Also read: ಚಾಮರಾಜನಗರದ ಕೂಡ್ಲೂರಿನಲ್ಲಿ ಅದ್ಧೂರಿ ಜಾತ್ರೆ: ಖಡ್ಗ ಸೇವೆ, ಕತ್ತಿ ಪವಾಡ ಇಲ್ಲಿನ ವಿಶೇಷ
20 ಗ್ರಾಂ ತೂಕದ 1 ಲಕ್ಷ ಮೌಲ್ಯದ ಚಿನ್ನದ ಸರ ಇದಾಗಿದ್ದು ,ಪೋಲೀಸರು ಪತ್ತೆಹಚ್ಚಿಕೊಡುವಂತೆ ಚಂದ್ರಮ್ಮ ಮನವಿ ಮಾಡಿದ್ದಾರೆ. ಪೋಲೀಸರು ಸಿಸಿ ಕ್ಯಾಮೆರಾ ಪರಿಶೀಲಿಸುತ್ತಿದ್ದು, ಶೀಘ್ರದಲ್ಲಿ ಸರ ಪತ್ತೆ ಹಚ್ಚುವ ಬಗ್ಗೆ ಭರವಸೆ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post