ಕಲ್ಪ ಮೀಡಿಯಾ ಹೌಸ್
ಸಾಗರ: ಕೆಳದಿ ಗ್ರಾ.ಪಂ ವತಿಯಿಂದ ಆಯೋಜಿಸಿದ್ದ “ಹಸಿರೀಕರಣ ಕಾರ್ಯಕ್ರಮ” ದಲ್ಲಿ ಶಾಸಕ ಹೆಚ್. ಹಾಲಪ್ಪ ಪಾಲ್ಗೊಂಡು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೆಳದಿ ಗ್ರಾ.ಪಂಗೆ ಸರ್ಕಾರದಿಂದ ಅತಿ ಹೆಚ್ಚು ಅನುದಾನ ಮಂಜೂರು ಮಾಡಿಸಿ, ಗ್ರಾಮದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕಾಮಗಾರಿಗಳು ನೆಡೆಯಲು ಕಾರಣಿಕರ್ತರಾದ ಶಾಸಕರಿಗೆ ಪಂಚಾಯ್ತಿ ವತಿಯಿಂದ ಅಭಿನಂದನೆ ಸಲ್ಲಿಸಿದರು.

ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಅಧಿಕಾರಿಗಳು, ಪಕ್ಷದ ವಿವಿಧ ಹಂತದ ಮುಖಂಡರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















