ಕಲ್ಪ ಮೀಡಿಯಾ ಹೌಸ್
ಸಾಗರ: ಇಲ್ಲಿನ ಅಶೋಕ ರಸ್ತೆಯ ನಿವಾಸಿ ಜಫ್ರುಲ್ಲಾ ಅವರ ತಾಯಿ ರಹೀಂ ಬೀ (104) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ 60ರಿಂದ 70ವರ್ಷ ಬದುಕಿದ್ದರೆ ಹೆಚ್ಚು ಎನ್ನುವ ಇಂದಿನ ದಿನಗಳಲ್ಲಿ 100 ವರ್ಷ ಬದುಕುವುದು ಒಂದು ದಾಖಲೆಯೇ ಸರಿ. ಅಂತಹ ದಾಖಲೆಗಳ ಸಾಲಿಗೆ ಸೇರುವ ಶತಾಯುಷಿಯೊಬ್ಬರು ಜೂನ್ 27ರ ಭಾನುವಾರದಂದು ತಮ್ಮ ಅಂತಿಮ ಕ್ಷಣಗಳನ್ನು ಮುಗಿಸಿರುತ್ತಾರೆ.
ಸಾಗರದ ಅಶೋಕ ರಸ್ತೆಯ ನಿವಾಸಿಯಾದ ಜಫ್ರುಲ್ಲಾ ಎಂಬುವವರ ತಾಯಿಯಾದ ರಹೀಂ ಬೀ ಅವರು 104 ವರ್ಷಗಳು ಬದುಕಿದ್ದರು ಆದರೆ ಕಳೆದ ಒಂದು ವರ್ಷದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಂತಹ ಇವರು 6 ಹೆಣ್ಣುಮಕ್ಕಳು ಹಾಗೂ 3 ಗಂಡುಮಕ್ಕಳನ್ನು ಆಗಲಿರುತ್ತಾರೆ. ಇಲ್ಲಿನ ಜನ್ನತ್ ನಗರದ ಮುಸ್ಲಿಂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post