ಸಾಗರ: ನಮ್ಮ ದೇಶಕ್ಕೆ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕಾದ ಅವಶ್ಯಕತೆಯಿದೆ. ಹೀಗಾಗಿ, ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಮೋದಿ ಆಡಳಿತವನ್ನು ಬಲ ಪಡಿಸಬೇಕು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮನವಿ ಮಾಡಿದ್ದಾರೆ.
ಸಾಗರದಲ್ಲಿಂದು ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ ಮತ್ತು ನಾನು ಸಂಸದನಾದ ಸಂದರ್ಭದಲ್ಲಿ ಸಿಂಹಪಾಲು ಅನುದಾನ ದೊರಕಿಸಿ ಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿದೆ ಎಂದು ತಿಳಿಸಿದರು.
ಲೋಕಸಭಾ ಉಪಚುನಾವಣೆಯಲ್ಲಿ ಸಾಗರ ಕ್ಷೇತ್ರದ ಜನರ ಪಾತ್ರ ದೊಡ್ಡದಾಗಿದ್ದು ನಮಗೆ ಆಶೀರ್ವಾದವನ್ನು ಮಾಡಬೇಕಿದೆ. ಈ ಹಿಂದೆ ನಾನು ಸಂಸದರಾದಾಗ ಅಭಿವೃದ್ಧಿ ದಿಕ್ಕಿನಲ್ಲಿ ಹೆಚ್ಚಿನ ಕೆಲಸಗಳನ್ನು ಮಾಡಿದ್ದೇನೆ. ಇನ್ನು ಕೆಲಸಗಳು ಪ್ರಗತಿಯಲ್ಲಿವೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಿವಮೊಗ್ಗ-ಸಾಗರ- ತಾಳಗುಪ್ಪದವರೆಗೆ ರೈಲ್ವೆ ಬ್ರಾಡ್ಗೇಜ್ ಕಾಮಗಾರಿ ಕೈಗೊಂಡಿತ್ತು. ಇದರ ಪ್ರತಿಫಲವಾಗಿ ಇಂದು ತಾಳಗುಪ್ಪವರೆಗೆ ಇಂಟರ್ ಸಿಟಿ ರೈಲು ಆರಂಭಗೊಂಡಿದೆ ಎಂದರು.
ಹೊಳೆಬಾಗಿಲು ಸೇತುವೆ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕಾಮಗಾರಿಗೆ ಚಾಲನೆ ನೀಡಿದ್ದರು. ಈಗಾಗಲೇ ಕೇಂದ್ರಕ್ಕೆ ಅಂದಾಜು ರೂ. 456 ಕೋಟಿ ಅಂದಾಜು ಪಟ್ಟಿಯನ್ನು ಕಳಿಸಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಸಾಗರ ನಗರಕ್ಕೆ ಶರಾವತಿ ನದಿಯಿಂದ ಕುಡಿಯು ನೀರಿನ ಯೋಜನೆ ಮಾಡುವಲ್ಲಿ ಪ್ರಮುಖ ಪಾತ್ರ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಆಗಿತ್ತು. ಈ ರೀತಿಯಲ್ಲಿ ದೊಡ್ಡ ದೊಡ್ಡ ಅಭಿವೃದ್ಧಿಕಾರ್ಯಗಳು ಸಾಗರ ಕ್ಷೇತ್ರಕ್ಕೆ ಆಗಿದೆ ಎಂದರು.
ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ನಮ್ಮನ್ನು ಅತ್ಯಧಿಕ ಮತದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ಸಾಗರ ಶಾಸಕ ಹರತಾಳು ಹಾಲಪ್ಪ, ರಾಜ್ಯ ಬಿಜೆಪಿ ವಿಶೇಷ ಆಹ್ವಾನಿತ ಸದಸ್ಯ ಎಸ್. ದತ್ತಾತ್ರಿ, ತಾಲೂಕು ಬಿಜೆಪಿ ಅಧ್ಯಕ್ಷ ಪ್ರಸನ್ನ ಕೆರೆಕೈ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಟಿ.ಡಿ. ಮೇಘರಾಜ್, ಸಾಗರ ನಗರ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿ ಚೇತನ್ ರಾಜ್ ಕಣ್ಣೂರು, ವಿ. ಮಹೇಶ್ ಸೇರಿದಂತೆ ಇದ್ದರು.
Discussion about this post