ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆ ಪ್ರವಾಸಿ ತಾಣಕ್ಕೆ ಹಾಗೂ ಕಾಡು ಮರಗಳಿಗೆ ಪ್ರಖ್ಯಾತಿ. ಮರಗಿಡಗಳನ್ನು ಬೆಳೆಸಲು ಸರ್ಕಾರ ಸಾರ್ವಜನಿಕವಾಗಿ ಸಾಕಷ್ಟು ಮಾಹಿತಿಗಳನ್ನು ನೀಡುತ್ತಿದೆ ಇಂತಹ ಸಂದರ್ಭದಲ್ಲಿ ಮರಗಳ್ಳರ ಹಾವಳಿ ಕೂಡ ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳಲ್ಲಿ ಹೆಚ್ಚಾಗುತ್ತಿದೆ. ಇಂತಹದ್ದೇ ಘಟನೆ ಇದೀಗ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಉಳ್ಳೂರಿನ ಜಿಗಳೆ ಮನೆ ಗ್ರಾಮದಲ್ಲಿ ನಡೆಯುತ್ತಿದೆ.ಗ್ರಾಮದ ಕೆಲವು ಮರಗಳ್ಳರು ಬಾನೆತ್ತರಕ್ಕೆ ಬೆಳೆದಂತಹ ಹಲವು ಮರಗಳನ್ನು ರಾತ್ರೋ ರಾತ್ರಿ ಸಾಗಿಸುತ್ತಿದ್ದಾರೆ. ಜಿಗಳೇಮನೆ ಕಾನುಮನೆಯ ಕ್ರಿಕೆಟ್ ಮೈದಾನದ ಹಿಂದೆ ಇದ್ದಂತಹ ಬಾನೆತ್ತರದ ಮರವನ್ನು ರಾತ್ರೋರಾತ್ರಿ ಕೊಯ್ದು ಕಳ್ಳ ಸಾಗಾಟನೆ ಮಾಡಿದ್ದಾರೆ.
ಹಾಗಾದರೆ ಇಷ್ಟು ದೊಡ್ಡ ಮರವನ್ನು ಕಡಿದರೂ ಅಥವಾ ಸಾಗಿಸುತ್ತಿದ್ದರೂ ಅರಣ್ಯ ಇಲಾಖೆಗೆ ಮಾಹಿತಿ ಇಲ್ಲವೆಂದರೆ ಇದು ನಿಜಕ್ಕೂ ವಿಪರ್ಯಾಸ ಅಥವಾ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಕಳ್ಳ ದಂಧೆಯಲ್ಲಿ ಶಾಮೀಲಾಗಿದ್ದಾರೆ ಒಂದೂ ತಿಳಿಯದು ಎಂದು ಸಾರ್ವಜನಿಕರು ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ.
ವರದಿ: ಪವನ್ ಕುಮಾರ್ ಕಠಾರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post