ಕಲ್ಪ ಮೀಡಿಯಾ ಹೌಸ್ | ಸಾಗರ/ಉಡುಪಿ |
ಸಾಗರ ತಾಲೂಕಿನ ತುಮರಿ ಬಳಿಯಲ್ಲಿ ರಾಮ್ ಸೇನಾ ತಾಲೂಕು ಮುಖಂಡ ಮಂಜುನಾಥ್ ಎನ್ನುವವರ ಮೇಲೆ ಕೆಲವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಮ್ ಸೇನಾ ಜಿಲ್ಲಾ ಮುಖಂಡ ಪ್ರಶಾಂತ್ ಬಂಗೇರ ಆಗ್ರಹಿಸಿದ್ದಾರೆ.
ಈ ಕುರಿತಂತೆ ಹೇಳಿಕೆ ನೀಡಿರುವ ಅವರು, ಮಂಜುನಾಥ್ ಮೇಲೆ ಸಿಗಂಧೂರು ನಿವಾಸಿಗಳಾದ ರಾಘವೇಂದ್ರ, ಹರೀಶ್, ಸುಬ್ರಹ್ಮಣ್ಯ, ನಿರಂಜನ್ ಎನ್ನುವವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ಮಂಜುನಾಥ್’ನನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದಿದ್ದಾರೆ.
Also read: ಶಿವಮೊಗ್ಗ ಮಾರಿ ಜಾತ್ರೆಗೆ ವಿದ್ಯುಕ್ತ ಚಾಲನೆ: ಸಾರ ಹಾಕಿ ಜಾತ್ರೆ ಆಮಂತ್ರಣ
ಈ ಕೃತ್ಯವನ್ನು ರಾಮ್ ಸೇನಾ ರಾಜ್ಯ ಘಟಕ ಹಾಗೂ ರಾಮ್ ಸೇನಾ ಶಿವಮೊಗ್ಗ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದಿರುವ ಅವರು, ಯಾವುದೇ ಕಾರಣ ಕ್ಕೂ ಅಪರಾಧಿಗಳನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ಈ ಬಗ್ಗೆ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಪೊಲೀಸರು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಿಗಳ ಬಂಧನ ಆಗಿಲ್ಲ. ಆರೋಪಿಗಳ ಕಾರು ಮುಟ್ಟುಗೋಲು ಆಗಿಲ್ಲ ಎಂದು ದೂರಿದ್ದಾರೆ.
ಶೀಘ್ರವೇ ಆರೋಪಿಗಳನ್ನು ಪೊಲೀಸ್ ಇಲಾಖೆ ಬಂಧಿಸಿ, ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post