No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Friday, October 16, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಭಾರತ ಮಾತೆಯ ವೀರ ಪುತ್ರ ಕರಾವಳಿಯ ಯೋಧ ಪ್ರಭಾಕರ್ ಶೆಟ್ಟಿ

ನಮ್ಮೂರ ಹೆಮ್ಮೆಯ ಸೈನಿಕ

kalpa News by kalpa News
June 20, 2019
in Special Articles
0
ಭಾರತ ಮಾತೆಯ ವೀರ ಪುತ್ರ ಕರಾವಳಿಯ ಯೋಧ ಪ್ರಭಾಕರ್ ಶೆಟ್ಟಿ
Share on FacebookShare on TwitterShare on WhatsApp

ಉಡುಪಿ ಜಿಲ್ಲೆಯಲ್ಲಿರುವ ಸುಂದರ ಪ್ರಕೃತಿ ಮಾತೆಯ ಹಸಿರಿನ ಒಪ್ಪ ಓರಣಗಳಿಂದ ಕಂಗೊಳಿಸುವ ನಮ್ಮೂರು ಆವರ್ಸೆ.

ಧರೆಯೊಳು ಸುಪ್ರಸಿದ್ಧವೆನಿಸಿದ ಪಂಚ ಶಂಕರನಾರಾಯಣ ದೇವಸ್ಥಾನಗಳಲ್ಲಿ ಒಂದಾದ ಆವರ್ಸೆ ಶ್ರೀಶಂಕರನಾರಾಯಣ ದೇವರು ನಮ್ಮೂರ ಗ್ರಾಮ ದೇವರು ಹಾಗೂ ನಮ್ಮೆಲ್ಲರ ಕಾಯೋ ದೇವರು. ಎತ್ತರದಿಂದ ಹರಿದು ಬರುವ ಸೀತಾ ನದಿ ನಮ್ಮೂರ ಜೀವನದಿ ಹಾಗೂ ಜೀವನಾಡಿ.

ಆವರ್ಸೆ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ನಮ್ಮೂರ ಜ್ಞಾನ ಕೇಂದ್ರ. ಸಾವಿರ ಸಂಖ್ಯೆಯ ವಿದ್ಯಾರ್ಥಿಗಳ ಜ್ಞಾನದ ಹಸಿವೆಯನ್ನು ನೀಗಿಸಿದ್ದು ಈ ಸಂಸ್ಥೆಯ ಹೆಮ್ಮೆ.

ದೇಶ ಕಾಯುವ ಸೈನಿಕರನ್ನು, ದೇಶಕ್ಕೆ ಅನ್ನ ನೀಡುವ ರೈತರನ್ನು, ಸಾಹಿತಿಗಳನ್ನು, ಕಲಾವಿದರನ್ನು, ವೈದ್ಯರನ್ನು, ವಕೀಲರನ್ನು, ಶಿಕ್ಷಕರನ್ನು ಸಮಾಜಕ್ಕೆ ಕೊಟ್ಟ ಹೆಮ್ಮೆ ಈ ಎರಡು ಶಿಕ್ಷಣ ಸಂಸ್ಥೆಗಳದ್ದು. ಇಂತಹ ಸಂಸ್ಥೆಯಲ್ಲಿ ಕಲಿತು ದೇಶ ಕಾಯುವ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಂಡು, ತಾಯಿ ಭಾರತಿಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿರುವ ವೀರ ಯೋಧರೊಬ್ಬರ ಕುರಿತು ಹೇಳಲೇಬೇಕು.


ಆವರ್ಸೆ ಹತ್ತಿರದಲ್ಲಿ ಚೋರಾಡಿ ಎನ್ನುವ ಪುಟ್ಟ ಪ್ರದೇಶದಲ್ಲಿ 1985ನೆಯ ಇಸವಿ ಮೇ 5ನೆಯ ತಾರೀಕಿನಂದು ನಾಗಯ್ಯ ಶೆಟ್ಟಿ ಹಾಗೂ ಗಿರಿಜಮ್ಮ ದಂಪತಿಗಳ 3ನೆಯ ಮಗನಾಗಿ ಪ್ರಭಾಕರ್ ಶೆಟ್ಟಿ ಅವರು ಜನಿಸಿದರು.

ಪ್ರಭಾಕರ್ ಶೆಟ್ಟಿಯವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಚೋರಾಡಿಯಲ್ಲಿ ಮುಗಿಸಿದರು. ತದನಂತರ ಆವರ್ಸೆ ಸರಕಾರಿ ಪ್ರೌಢಶಾಲೆಯಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಮುಗಿಸಿದರು.

ನಂತರ ಪದವಿಪೂರ್ವ ಶಿಕ್ಷಣಕ್ಕಾಗಿ ಶ್ರೀದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜು ಮಂದರ್ತಿ ಸೇರಿಕೊಂಡರು. ಪಿಯುಸಿ ಮುಗಿದ ಮೇಲೆ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಪದವಿ ಕಾಲೇಜು ಬಾರ್ಕೂರಿನಲ್ಲಿ ಕಲಾ ವಿಭಾಗದಲ್ಲಿ ತಮ್ಮ ಪದವಿಯನ್ನು ಮುಗಿಸಿದರು.


ಚಿಕ್ಕಂದಿನಿದಲೂ ದೇಶಾಭಿಮಾನವನ್ನು ಬೆಳೆಸಿಕೊಂಡ ಪ್ರಭಾಕರ್ ಅವರು ಮುಂದೊಂದು ದಿನ ಭಾರತೀಯ ಸೈನ್ಯವನ್ನು ಸೇರಬೇಕು ದೇಶಕ್ಕಾಗಿ ದುಡಿಯಬೇಕು ಎನ್ನುವ ಹೆಬ್ಬಯಕೆಯನ್ನು ಹೊಂದಿದ್ದರು.

ಸೈನ್ಯಕ್ಕೆ ಸೇರಬೇಕು ಎನ್ನುವ ಕಾರಣಕ್ಕಾಗಿ ಪದವಿ ಶಿಕ್ಷಣ ಮುಗಿದ ನಂತರ ತಮ್ಮ ಪ್ರಯತ್ನವನ್ನು ಮುಂದುವರೆಸುತ್ತಾರೆ.

ಸೇನೆಗೆ ಸೇರಬೇಕಾದರೆ ಕಟ್ಟು ಮಸ್ತಿನ ದೇಹವಿದ್ದರೆ ಸಾಲದು ಭವ್ಯ ಭರತಭೂಮಿಯನ್ನು ಹೃದಯವೆಂಬ ತೊಟ್ಟಿಲಿನಲಿಟ್ಟು ಪೂಜಿಸುವ ಮನಃಸ್ಥಿತಿ ಕೂಡ ಇರಬೇಕು.

ಅದೊಂದು ಸುಂದರ ಶ್ರಾವಣ ಕಾಲ. ಹಳ್ಳಿ ಹುಡುಗನ ಅದೃಷ್ಟ ಬದಲಾಗುವ ಕಾಲ ಬಂದೇ ಬಿಟ್ಟಿತು. ಬಹುದಿನಗಳ ಪರಿಶ್ರಮಕ್ಕೆ ಫಲ ದೊರಕಿತು. 2006ರಲ್ಲಿ ಹಾಸನದಲ್ಲಿ ನಡೆದ ಭೂಸೇನಾ ನೇಮಕಾತಿ ಶಿಬಿರದಲ್ಲಿ ಪ್ರಭಾಕರ್ ಅವರು ಭಾರತೀಯ ಭೂಸೇನೆಗೆ ಆಯ್ಕೆಯಾದರು.


ಒಂದೆಡೆ ಸೈನ್ಯಕ್ಕೆ ಸೇರಿದ ಖುಷಿ ಇನ್ನೊಂದೆಡೆ ಪೋಸ್ಟಿಂಗ್ ಆಗಿರುವುದು ಸೇನೆಕ್ಕೆ……. ಜಮ್ಮು ಕಾಶ್ಮೀರ ಭಾರತ ಭೂ ಭಾಗವೇ ಆಗಿದ್ದರೂ ಕಣ್ಣ ಮುಂದೆ ಸಾವಿನ ರುದ್ರ ನರ್ತನ ನಡೆಯುವ ಭಯಾನಕ ಜಗತ್ತು. ಬಂದುದೆಲ್ಲವು ಬರಲಿ ಜೊತೆಗೆ ತೀರ್ಥ ವಿನಾಯಕನ ದಯವಂದಿರಲಿ ಎಂದು ಹಳ್ಳಿ ಹುಡುಗ ದಿಲ್ಲಿಯ ಕಡೆ ಪ್ರಯಾಣ ಬೆಳೆಸುತ್ತಾನೆ.

ಮೈ ಕೊರೆಯುವ ಚಳಿ, ಮಳೆ ಹಿಮಪಾತ, ಇಂದು ಜೊತೆಗಿರುವವನು ನಾಳೆ ಜೊತೆಗಿರುವನೋ ಎಲ್ಲವೋ ಎನ್ನುವ ನೋವು. ಇದನೆಲ್ಲ ಸಹಿಸಿಕೊಂಡು ಸತತ 10 ವರ್ಷ ಅಂದರೆ 2006 ರಿಂದ 2016ರ ತನಕ ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದರು. ಪ್ರಸ್ತುತ ಪ್ರಭಾಕರ್ ಅವರು ಗುಜರಾತ್’ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಸ್ತುತ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಪ್ರಭಾಕರ್ ಅವರು 2011 ರಲ್ಲಿ ನಾಗರತ್ನ ಶೆಟ್ಟಿ ಎನ್ನುವವರನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪ್ರಭಾಕರ್ ಅವರೇ ನಿಮ್ಮನ್ನು ನಮ್ಮ ಅವರ್ಸೆಯ ಮಣ್ಣಿನ ಮಗ ಎಂದು ಹೇಳಿಕೊಳ್ಳುವುದಕ್ಕೆ ನಮಗೆ ಅಪಾರವಾದ ಹೆಮ್ಮೆ ಇದೆ.


ತಂದೆ ತಾಯಿ ಕೃಷಿಯನ್ನು ಮಾಡಿಕೊಂಡು ಮಗನಿಗೆ ವಿದ್ಯಾಭ್ಯಾಸ ನೀಡಿ ಭಾರತ ಮಾತೆಯ ಸೇವೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟ ನಿಮಗೆ ನಮ್ಮೂರ ಜನರ ಪರವಾಗಿ ಅಭಿನಂದನೆಗಳು.

ಅವರ್ಸೆಯ ಮಣ್ಣಿನಲ್ಲಿ ಹುಟ್ಟಿ ತೀರ್ಥ ವಿನಾಯಕನ ಸನ್ನಿಧಾನದಲ್ಲಿ ಬೆಳೆದ ನಿಮ್ಮ ಕೀರ್ತಿ ಜಗವೆಲ್ಲ ಬೆಳಗಲಿ.

ದೇಶ ಕಾಯುವ ಕಾಯಕವನ್ನು ಆಯ್ಕೆ ಮಾಡಿಕೊಂಡು ನಮ್ಮೂರಿಗೆ ಗೌರವವನ್ನು ತಂದುಕೊಟ್ಟ ನಿಮಗೆ ಅನಂತ ಅನಂತ ಧನ್ಯವಾದಗಳು.

ನಾವೆಲ್ಲರೂ ಅನುದಿನವು ಆರಾಧಿಸುವ ಆರಾಧ್ಯ ಮೂರ್ತಿ ಮಂದರ್ತಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಆಯಸ್ಸು ಆರೋಗ್ಯ ಭಾಗ್ಯವನಿತ್ತು ಸದಾ ಕಾಲ ಸಲಹಲಿ.

ಲೇಖನ: ಗೌರೀಶ್ ಆವರ್ಸೆ

Tags: coastal newsIndiaindian armyKannada ArticleSpecial ArticleUdupiಅವರ್ಸೆಉಡುಪಿಕರಾವಳಿಪ್ರಕೃತಿ ಮಾತೆಪ್ರಭಾಕರ್ ಶೆಟ್ಟಿಭಾರತಭಾರತೀಯ ಸೇನೆಮಳೆ ಹಿಮಪಾತಶಂಕರನಾರಾಯಣ ದೇವಸ್ಥಾನ
Share199Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಪ್ರಧಾನಿ ನೇತೃತ್ವದಲ್ಲಿ ಇಂದು ಮಹತ್ವದ ಸರ್ವಪಕ್ಷ ಸಭೆ: ಮಮತಾ, ಉದ್ಧವ್ ಗೈರು

Next Post

ಸಾಹಸಸಿಂಹ ವಿಷ್ಣು ಸ್ಮಾರಕ: ಕೋರ್ಟ್ ಹಸಿರು ನಿಶಾನೆ ತೋರಿದರೂ ರೈತರಿಂದ ಅಡ್ಡಿ

kalpa News

kalpa News

Next Post

ಸಾಹಸಸಿಂಹ ವಿಷ್ಣು ಸ್ಮಾರಕ: ಕೋರ್ಟ್ ಹಸಿರು ನಿಶಾನೆ ತೋರಿದರೂ ರೈತರಿಂದ ಅಡ್ಡಿ

Leave a Reply Cancel reply

Your email address will not be published. Required fields are marked *

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL