ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
2000ನೆಯ ಇಸವಿಯಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ್ Dr. Vishnuvardhan ಅಭಿನಯದ ಸೂರ್ಯವಂಶ ಚಿತ್ರ ಸ್ಯಾಂಡಲ್’ವುಡ್ Sandalwood ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೇ ಎಂದೂ ಮರೆಯದ ಸಾಧನೆ ಮಾಡಿ, ಚಿತ್ರರಸಿಕರ ಮನದಲ್ಲಿ ಇಂದಿಗೂ ಅಚ್ಚಾಗಿ ಉಳಿದಿದೆ.
ಈಗ ಅದೇ ಸೂರ್ಯವಂಶ Suryavamsha ಟೈಟಲ್’ನಲ್ಲಿ ವಿಷ್ಣುವರ್ಧನ್ ಅಳಿಯ ಅನಿರುದ್ ನಾಯಕತ್ವದಲ್ಲಿ ಹೊಸ ಧಾರವಾಹಿ ಕಿರುತೆರೆಗೆ ಬರಲು ಸಿದ್ದವಾಗಿದೆ.
ಹೌದು… ಬಹಳಷ್ಟು ದಿನಗಳಿಂದ ಈ ಧಾರವಾಹಿ ಆರಂಭವಾಗಲಿದೆ ಎಂದು ಹೇಳಲಾಗಿತ್ತು. ಈಗ ಇದರ ಅಧಿಕೃತ ಟ್ರೇಲರನ್ನು ನಟ ಅನಿರುದ್ Actor Anirudh ಶೇರ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.

Also read: ಭಾರತೀಯ ಮಹಾಕಾವ್ಯದ ಸಂದೇಶ ಯುವಜನರಿಗೆ ತಲುಪಿಸಲು ಸಮರೋಪಾದಿ ಕೆಲಸ ನಡೆಯಲಿ
ವಿಷ್ಣು ದಾದಾ ಅವರ ಆಕ್ಷನ್ ಚಿತ್ರಗಳನ್ನು ನೋಡಿದಂತೆಯೇ ಭಾಸವಾಗುತ್ತದೆ ಈ ಪ್ರೋಮೋ ದೃಶ್ಯಗಳು. ಸಾಮಾನ್ಯ ಟಿವಿ ಧಾರವಾಹಿಗಿಂತಲೂ ಭಿನ್ನವಾಗಿ ಸಿನಿಮಾ ರೀತಿಯಲ್ಲಿ ರವಿತೇಜ ಅವರ ನಿರ್ದೇಶನದಲ್ಲಿ ಪ್ರೋಮೋ ಮೂಡಿಬಂದಿದ್ದು, ಅನಿರುದ್ ಎಂಟ್ರಿ ಮಾಸ್ ಆಗಿ ಹೊರಬಂದಿದೆ. ವಿನೋದ್ ಅವರ ಸಾಹಸ ನಿರ್ದೇಶನ ಈ ಧಾರವಾಹಿಗೆ ಇದೆ.

2000ರಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ಸೂರ್ಯವಂಶ ಚಿತ್ರವನ್ನು ಆಗ ಎಸ್. ನಾರಾಯಣ್ ನಿರ್ದೇಶಿಸಿದ್ದರು. ಬಾಕ್ಸ್ ಆಫೀಸಿನಲ್ಲಿ ಧೂಳೆಬ್ಬಿಸಿದ್ದ ಚಿತ್ರ, ಆಲ್ ಟೈಮ್ ಹಿಟ್ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈಗ ಅದೇ ಹೆಸರಿನ ಧಾರಾವಾಹಿ ಕಿರುತೆರೆಗೆ ಬರುತ್ತಿರುವುದು ಭಾರೀ ನಿರೀಕ್ಷೆ ಮೂಡಿಸಿದೆ.
ಆಲ್ ದಿ ಬೆಸ್ಟ್ ಅನಿರುದ್ ಜತ್ಕರ್…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post