ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭೂತ ಕೋಲ, ದೈವ ನಂಬುವುದು ನಮ್ಮ ವೈಯಕ್ತಿಕ. ಅದನ್ನು ಸಮಾಜದ ಮುಂದೆ ಕಿತ್ತಾಡುವುದು ಅಸಹ್ಯ. ಇಂತಹ ವಿಷಯಗಳನ್ನು ಕೆದಕಲು, ಮಾತನಾಡಲು ಹೋಗಬಾರದು, ಅದು ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತದೆ ಎಂದು ನಟ ಉಪೇಂದ್ರ Actor Upendra ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಕರಾವಳಿ ಭಾಗದವನು, ಭೂತ-ಕೋಲಗಳನ್ನು ನೋಡಿಕೊಂಡು ಬೆಳೆದವನು. ನಮ್ಮ ಭಾಗದಲ್ಲಿ ಭೂತ ಕೋಲದ ಬಗ್ಗೆ ವಿಶೇಷವಾದ ನಂಬಿಕೆಯಿದೆ. ಇವತ್ತಿಗೂ ನಮ್ಮ ತಂದೆ ಪ್ರತಿವರ್ಷ ನಾಗನ ಪೂಜೆ ಮಾಡುತ್ತಾರೆ. ಬಹಳ ನಂಬಿಕೆಯಿರುವ ಜಾಗ ಕೂಡ, ಅದರ ಬಗ್ಗೆ ಮಾತನಾಡಬಾರದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post