ಬೆಂಗಳೂರು: ಕನ್ನಡ ಚಿತ್ರರಂಗದ ಕನಸುಗಾರ ವಿ. ರವಿಚಂದ್ರನ್ ಇನ್ನು ಮುಂದೆ ಡಾಕ್ಟರ್ ವಿ. ರವಿಚಂದ್ರನ್ ಆಗಲಿದ್ದಾರೆ.
ಹೌದು… ಸಿಎಂಆರ್ ವಿಶ್ವವಿದ್ಯಾಲಯದ ವತಿಯಿಂದ ನೀಡಲಾಗುವ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ವಿ. ರವಿಚಂದ್ರನ್ ಆಯ್ಕೆಯಾಗಿದ್ದು, ನ.3ರಂದು ನಡೆಯುವ ಕಾರ್ಯಕ್ರಮದಲ್ಲಿ ಅವರಿಗೆ ಪ್ರದಾನ ಮಾಡಲಾಗುತ್ತದೆ.
ಸುಮಾರು ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ರವಿಚಂದ್ರನ್ ತಮ್ಮ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿದ್ದು, ಚಿತ್ರರಂಗದ ಹಲವು ಕ್ಷೇತ್ರಗಳಲ್ಲಿ ಪ್ರತಿಭೆಯನ್ನು ಹೊಂದಿದ್ದಾರೆ. ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ಸಾಹಿತ್ಯಕಾರರಾಗಿ, ಸಂಗೀತಕಾರರಾಗಿಯೂ ಕನಸುಗಾರ ಗುರುತಿಸಿಕೊಂಡಿದ್ದಾರೆ.
Discussion about this post