ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಬಿಡುಗಡೆ ಸನ್ನಿಹಿತವಾಗುತ್ತಿದ್ದು, ಈ ಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡುವಂತೆ ಅಭಿಮಾನ ವಲಯದಿಂದ ಒತ್ತಡ ಕೇಳಿಬಂದಿದೆ.
ಈ ಕುರಿತಂತೆ ಅಭಿಮಾನಿಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದು, ನಾಡು, ನುಡಿ ಉಳಿವಿನ ವಿಚಾರವಾಗಿ ಬರುತ್ತಿರುವ ಈ ಚಿತ್ರಕ್ಕೆ ಸದ್ಯ ಟ್ಯಾಕ್ಸ್ ಫ್ರೀ ಮಾಡುವಂತೆ ಕೋರಿದ್ದಾರೆ.
ಅರಣ್ಯ ಸಂಪತ್ತು, ಪ್ರಾಣಿ ಪಕ್ಷಿ ಸಂಕುಲ ಉಳಿಸುವ ನಿಟ್ಟಿನಲ್ಲಿ ಶುರುವಾದ ಚಿತ್ರ ಗಂಧದಗುಡಿ. ನಾಡು, ನುಡಿ ವಿಚಾರವಾಗಿ ಬರುತ್ತಿರುವ ಈ ಚಿತ್ರಕ್ಕೆ ಯಾವುದೇ ತೆರಿಗೆ ವಿಧಿಸದೇ ವಿನಾಯ್ತಿ ನೀಡುವಂತೆ ಅಭಿಮಾನಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post