ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಮಾಲ್ಗುಡಿ ಡೇಸ್‌ನಲ್ಲಿ ವೃದ್ಧ ಹಾಗೂ ಯುವಕ ಎರಡೂ ಶೇಡ್‌ಗಳಲ್ಲಿ ಮಿಂಚಿದ್ದ ನಟ ವಿಜಯ ರಾಘವೇಂದ್ರ ಸೀತಾರಾಮ್ ಬಿನೋಯ್ -ಕೇಸ್ ನಂ. 18 ಚಿತ್ರದ ಮುಖಾಂತರ ಖಡಕ್ ಪೊಲೀಸ್ ಆಫೀಸರ್ ಆಗಿದ್ದಾರೆ.
ವಿಜಯ ರಾಘವೇಂದ್ರ ಅವರ 50ನೆಯ ಚಿತ್ರ ಇದಾಗಿದ್ದು, ಪುನೀತ್ ರಾಜಕುಮಾರ್ ಅವರ ಪಿಆರ್’ಕೆ ಆಡಿಯೋ ಯೂಟ್ಯೂಬ್ ಚಾನಲ್’ನಲ್ಲಿ ಟ್ರೇಲರ್ ನಿನ್ನೆ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ಸೆನ್ಸೇಷನ್ ಸೃಷ್ಟಿಸಿದೆ.
ಭಾರೀ ಕುತೂಹಲ ಮೂಡಿಸಿರುವ ಕ್ರೈಂ ಥ್ರಿಲ್ಲರ್ ಸೀತಾರಾಂ ಬಿನೋಯ್-ಕೇಸ್ ನಂ. 18 ಚಿತ್ರದ ಟ್ರೇಲರ್ 2.20 ಸೆಕೆಂಡ್‌ಗಳಿದೆ. ಚಿತ್ರದ ಪ್ರತಿಯೊಂದು ಫ್ರೇಮ್‌ನ ಕ್ಯಾಮೆರಾ ವರ್ಕ್, ಸಿಚ್ಯೂಷನ್ ವರ್ಕೌಟ್ ಮಾಡಿ ರೆಡಿ ಮಾಡಿದ್ದಾರೆ. ಶಿವಮೊಗ್ಗ ಸಮೀಪದ ಆನೆಗದ್ದೆ ಸ್ಟೇಷನ್ ವರ್ಗಾವಣೆಯಾಗಿ ಬರುವ ಅಧಿಕಾರಿ ಸೀತಾರಾಮ್ ಬಿನೋಯ್. ಒಂದು ನಿಗೂಢ ಪ್ರಕರಣವನ್ನು ಬೇಧಿಸುವಾಗ ಓರ್ವ ಪೊಲೀಸ್ ಅಧಿಕಾರಿ ಹೇಗೆಲ್ಲಾ ಕಷ್ಟ ಪಡುತ್ತಾನೆ, ಏನೆಲ್ಲಾ ತ್ಯಾಗ ಮಾಡುತ್ತಾನೆ, ಕಳೆದುಕೊಳ್ಳುತ್ತಾನೆ ಎಂಬುದರ ಪ್ರತಿಬಿಂಬ ಈ ಚಿತ್ರ ಎನ್ನುವುದು ಟ್ರೇಲರ್‌ನಿಂದ ತಿಳಿಯುತ್ತಿದೆ.
ಬಹುತೇಕ ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಮಡಿಲಲ್ಲಿ ಚಿತ್ರೀಕರಣ ನಡೆದಿದೆ. ಆಗಸ್ಟ್ 15 ರಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರೀಮಿಯರ್ ಆಗುತ್ತಿದ್ದು, ಆ. ೧೬ರಂದು ಸಿನಿಮಾ ಮಂದಿರದಲ್ಲಿ ಬಿಡುಗಡೆಯಾಗುತ್ತಿದ್ದು, ಇದು ಈ ಚಿತ್ರದ ವಿಶೇಷ. ಸ್ಯಾಂಡಲ್’ವುಡ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟಿವಿಯಲ್ಲಿ ಪ್ರೀಮಿಯರ್ ಆಗಿ ಆನಂತರ ಚಿತ್ರಮಂದಿರದಲ್ಲಿ ಬಿಡುಗಡೆಯಾಗತ್ತಿರುವ ಚಿತ್ರ ಎಂಬ ಹೆಗ್ಗಳಿಕೆ ಸೀತಾರಾಂ ಬಿನೋಯ್-ಕೇಸ್ ನಂ. 18ಕ್ಕೆ ಸಲ್ಲುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post