ಕಲ್ಪ ಮೀಡಿಯಾ ಹೌಸ್ | ಸಿನಿಮಾ |
ಬಜಾರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದ ಶೋಕ್ದಾರ್ ಖ್ಯಾತಿಯ ಧನ್ವೀರ್ ಗೌಡ ಕೈವ ಹಾಗೂ ವಾಮನ ಸಿನಿಮಾ ರಿಲೀಸ್’ಗೆ ಎದುರು ನೋಡುತ್ತಿದ್ದಾರೆ.
ಶಂಕರ್ ರಾಮನ್ ನಿರ್ದೇಶನದ ವಾಮನ ಹಾಗೂ ಜಯತೀರ್ಥ ನಿರ್ದೇಶನದ ಕೈವ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಈ ಚಿತ್ರಗಳ ಬಿಡುಗಡೆ ತಯಾರಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಶೋಕ್ದಾರ್ ಧನ್ವೀರ್ ಬೇರ್ ಬಾಡಿಯಲ್ಲಿ ದರ್ಶನ ಕೊಟ್ಟಿದ್ದಾರೆ.
ಹೇಳಿ ಕೇಳಿ ಧನ್ವೀರ್ ಫಿಟ್ನೆಸ್’ಗೆ ಹೆಚ್ಚು ಒತ್ತು ಕೊಡುವವರು. ಪ್ರತಿ ಸಿನಿಮಾಕ್ಕಾಗಿ ಬೇಜಾನ್ ಕಸರತ್ತು ನಡೆಸುವ ಅವರೀಗ ಸಿಕ್ಸ್ ಪ್ಯಾಕ್ ಕ್ಲಬ್ ಸೇರಿದ್ದಾರೆ. ಹುರಿಗೊಳಿಸಿದ ಕಟ್ಟುಮಸ್ತಾದ ದೇಹ, ಉಕ್ಕಿನ ತೋಳುಗಳಲ್ಲಿ ಧನ್ವೀರ್ ದರ್ಶನ ಕೊಟ್ಟಿರುವ ಝಲಕ್ ನೋಡ್ತಿದ್ರೆ ಬಾಡಿ ಬಿಲ್ಡರ್’ಗಳೇ ನಾಚುವಂತೆ ಕಸರತ್ತು ಮಾಡಿರುವುದು ಗೊತ್ತಾಗ್ತಿದೆ.
Also read: ಶೀಘ್ರದಲ್ಲೇ ಬರಲಿದೆ ಆಪರೇಶನ್ ಡಿ ಟ್ರೇಲರ್
ಇಷ್ಟೆಲ್ಲಾ ಕಷ್ಟಪಟ್ಟು ದೇಹವನ್ನು ಹುರಿಗೊಳಿಸಿರುವ ಧನ್ವೀರ್ ಗೌಡ ಮುಂದಿನ ಚಿತ್ರಕ್ಕಾಗಿ ಸಜ್ಜಾಗುತ್ತಿದ್ದಾರೆ. ಮಾಸ್, ಲವರ್ ಬಾಯ್ ಹೀಗೆ ಯಾವುದೇ ಕೊಟ್ಟರು ಅದ್ಭುತವಾಗಿ ನಟಿಸುವ ಧನ್ವೀರ್ ಬಜಾರ್ ಚಿತ್ರದಲ್ಲಿ ಮಾಸ್ ಅವತಾರದಲ್ಲಿ, ಬೈ ಟು ಲವ್ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಅವರೀಗ ವಾಮನ ಹಾಗೂ ಕೈವ ಚಿತ್ರದಲ್ಲಿ ಮಾಸ್ ಅವತಾರದಲ್ಲಿ ಮತ್ತೊಮ್ಮೆ ಚಿತ್ರರಸಿಕರನ್ನು ರಂಜಿಸಲು ಅಣಿಯಾಗಿದ್ದಾರೆ.
ಒಂದಷ್ಟು ಹೊಸ ಕಥೆ ಕೇಳಿರುವ ಅವರು ಶೀಘ್ರದಲ್ಲೇ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಲಿದ್ದಾರೆ. ಹೊಸ ಸಿನಿಮಾಗಾಗಿ ಬಜಾರ್ ಹುಡ್ಗ ಈ ಪಾಟಿಗೆ ಕಸರತ್ತು ಮಾಡಿರೋದಾ ಅನ್ನೋದು ಸದ್ಯದಲ್ಲಿ ರಿವೀಲ್ ಆಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post