ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅಪರೂಪದ ನಟ, ರೆಬಲ್ ಸ್ಟಾರ್ ಅಂಬರೀಶ್(66) ತೀವ್ರ ಹೃದಯಾಘಾತದಿಂದಾಗಿ ವಿಧಿವಶರಾಗಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಂಬರೀಶ್ ಇಂದು ಇಹಲೋಕ ತ್ಯಜಿಸಿದ್ದಾರೆ.
ಉಸಿರಾಟ ಹಾಗೂ ಶಾಸ್ವಕೋಶ ಸಮಸ್ಯೆಯಿಂದ ಇಂದು ಸಂಜೆ ಅವರ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾಗಿತ್ತು. ಕೂಡಲೇ ಅವರನ್ನ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು 10.40ರ ವೇಳೆಗೆ ಅವರ ಇಹಲೋಕ ತ್ಯಜಿಸಿದ್ದಾರೆ.
ಈಗಾಗಲೇ ನಟರಾದ ಪುನೀತ್ ರಾಜಕುಮಾರ್, ಯಶ್ ಅವರುಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಇವರ ಬೆನ್ನಲ್ಲೇ ಚಿತ್ರರಂಗ ಹಾಗೂ ರಾಜಕೀಯ ಗಣ್ಯರ ದಂಡೇ ಆಸ್ಪತ್ರೆಯತ್ತ ಧಾವಿಸಿ ಬರುತ್ತಿದ್ದು, ಸಾವಿರಾರು ಅಭಿಮಾನಿಗಳು ಆಸ್ಪತ್ರೆ ಹೊರಭಾಗದಲ್ಲಿ ರೋಧಿಸುತ್ತಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಮಂಡ್ಯ ಜಿಲ್ಲೆ ದೊಡ್ಡರಸನಕೆರೆ ಗ್ರಾಮದವರಾದ ಅಂಬರೀಶ್ ಜನಿಸಿದ್ದು 1952 ಮೇ 29ರಂದು. ಹುಚ್ಚೇಗೌಡ ಹಾಗೂ ಪದ್ಮಮ್ಮ ದಂಪತಿಯವರ ಪುತ್ರರಾದ ಅಂಬರೀಶ್ ಅವರ ಮೂಲ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್.
ಖ್ಯಾತ ಪಿಟೀಲು ವಿದ್ವಾನ್ ಟ.ಚೌಡಯ್ಯ ನವರ ಮೊಮ್ಮಗನಾದ ಇವರು, 1972ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಸಿನಿಮಾದ ಜಲೀಲ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅಂಬರೀಶ್ ಸುಮಾರು 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.ದ್ದಾರೆ.
Discussion about this post