Kalpa News Digital Media
Source: ANI
ನವದೆಹಲಿ: ರಾಮಜನ್ಮ ಭೂಮಿ ವಿಚಾರದಲ್ಲಿ ಐತಿಹಾಸಿಕ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್ ಇಂದು ಮತ್ತೆ ಮೂರು ಪ್ರಮುಖ ಪ್ರಕರಣಗಳ ತೀರ್ಪನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಅಯೋಧ್ಯೆ ತೀರ್ಪನ್ನು ಪ್ರಕಟಿಸಿದ ಸಿಜೆಐ ರಂಜನ್ ಗೊಗೋಯ್ ಸೇರಿದಂತೆ ನಾಲ್ವರು ಪ್ರಮುಖ ನ್ಯಾಯಾಧೀಶರು ನವೆಂಬರ್ 17ರಂದು ನಿವೃತ್ತರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದೇ ಮೂರು ಪ್ರಮುಖ ಪ್ರಕರಣಗಳ ತೀರ್ಪನ್ನು ನೀಡಲಿದ್ದಾರೆ ಎಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಸುಪ್ರೀಂ ಕೋರ್ಟ್‌ನತ್ತ ನೆಟ್ಟಿದೆ.
ಕೇರಳದ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ನಿಷೇಧ ವಿಚಾರ, ರಫೇಲ್ ಡೀಲ್ ಹಾಗೂ ರಾಹುಲ್ ಗಾಂಧಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣಗಳ ಅಂತಿಮ ತೀರ್ಪು ಇಂದು ಹೊರಬೀಳುವ ಸಾಧ್ಯತೆದೆ ಎನ್ನಲಾಗಿದ್ದರೂ, ಶಬರಿಮಲೆ ದೇವಾಲಯದ ತೀರ್ಪಿನ ಸಾಧ್ಯತೆ ಇಂದು ಕಡಿಮೆಯೇ ಎಂದು ಮೂಲಗಳು ಹೇಳುತ್ತಿವೆ.
Get In Touch With Us info@kalpa.news Whatsapp: 9481252093
















