ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೃಷ್ಣ ಜನ್ಮಾಷ್ಟಮಿ ಆಚರಣೆ ಮೊನ್ನೆಯಷ್ಟೇ ಇಡಿಯ ದೇಶವನ್ನು ಸಂಭ್ರಮದಲ್ಲಿ ತೇಲಿಸಿತ್ತು. ಬಹಳಷ್ಟು ಮನೆಗಳಲ್ಲಿನ ಪುಟ್ಟ ಮಕ್ಕಳು ಕೃಷ್ಣನ ವೇಷದಲ್ಲಿ ಕಂಗೊಳಿಸುತ್ತಾ, ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದರು.
ಇಂತಹ ಪುಟ್ಟ ಮಕ್ಕಳ ಶ್ರೀಕೃಷ್ಣನ ಅಲಂಕಾರದ ಫೋಟೋಗಳನ್ನು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಹಂಚಿಕೊಳ್ಳಲು ಕೋರಲಾಗಿತ್ತು. ಇದಕ್ಕೆ ನಮಗೆ ಬಂದ ಫೋಟೋಗಳ ಸಂಖ್ಯೆ 160ಕ್ಕೂ ಅಧಿಕ. ನಮಗೆ ಫೋಟೋಗಳಲ್ಲಿ ಗುಣಮಟ್ಟ ಹಾಗೂ ಮಾಹಿತಿಯನ್ನು ಆಧರಿಸಿ ಆಯ್ಕೆ ಮಾಡಿರುವ 58 ಮಾತ್ರ ಇಲ್ಲಿ ಪ್ರಕಟಿಸಲಾಗಿದೆ. ಗುಣಮಟ್ಟವಿಲ್ಲದ ಹಾಗೂ ಮಾಹಿತಿಯೇ ಇಲ್ಲದ ಫೋಟೋಗಳನ್ನು ತಿರಸ್ಕರಿಸಲಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಮೈಸೂರು, ಉತ್ತರ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಸಿಂಗಾಪುರ್, ಅಮೆರಿಕಾ ಸೇರಿದಂತೆ ಸ್ಥಳೀಯ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೂ ಫೋಟೋಗಳನ್ನು ನಮ್ಮ ಓದುಗರು ಕಳುಹಿಸಿದ್ದಾರೆ. ಈ ಸ್ಪಂದನೆ ಕಂಡು ನಮ್ಮ ಉತ್ಸಾಹ ಇಮ್ಮಡಿಗೊಂಡಿದೆ. ಹಾಗೆಯೇ ನಮ್ಮ ಜವಾಬ್ದಾರಿಯೂ ಸಹ ಹೆಚ್ಚಾಗಿದೆ. ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾಗೆ ನೀವು ತೋರಿಸುತ್ತಿರುವ ಪ್ರೀತಿ ಹಾಗೂ ಬೆಂಬಲ ಭವಿಷ್ಯದ ದಿನಗಳಲ್ಲೂ ಹೀಗೇ ಇರಲಿ ಎಂದು ವಿನಂತಿಸುತ್ತೇವೆ…
ಗಮನಿಸಿ:
ನಿಮ್ಮ ಪ್ರೋತ್ಸಾಹ ಕಂಡು ನೀವು ಕಳುಹಿಸಿದ ಫೋಟೋಗಳಲ್ಲಿ ಟಾಪ್ 10ನ್ನು ಆಯ್ಕೆ ಮಾಡಿ ಪ್ರಕಟಿಸಲು ತತಕ್ಷಣದ ನಿರ್ಧಾರ ಕೈಗೊಂಡೆವು. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ದಶಕಗಳ ಕಾಲ ಅನುಭವ ಹೊಂದಿರುವ ಗಣ್ಯರಿಗೆ ನಾವು ಆಯ್ಕೆ ಮಾಡಿದ 58 ಫೋಟೋಗಳನ್ನು ನೀಡಲಾಗಿದೆ. ಮಗುವಿನ ಅಲಂಕಾರ, ಮುಗ್ದತೆಯ ನಗು, ಸಹಜತೆಯ ಆಧಾರದಲ್ಲಿ 10 ಫೋಟೋಗಳನ್ನು ಆಯ್ಕೆ ಮಾಡಲು ಕೋರಲಾಗಿದೆ. ಈ ವೇಳೆ ಗಣ್ಯರಿಗೆ ಮಗುವಿನ ಫೋಟೋಗಳನ್ನು ಮಾತ್ರ ನೀಡಲಾಗಿದೆಯೇ ಹೊರತು ಹೆಸರು ಸೇರಿದಂತೆ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ.
ಗಣ್ಯರು ಆಯ್ಕೆ ಮಾಡಿದ ಫೋಟೋ ಹಾಗೂ ಯಾಕೆ ಅವರು ಆ ಫೋಟೋವನ್ನು ಆಯ್ಕೆ ಮಾಡಿದರು ಎಂಬ ಅಭಿಪ್ರಾಯವನ್ನು ಅವರದೇ ಪದಗಳಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಪ್ರಕಟಿಸಲಾಗುವುದು.
-ಸಂಪಾದಕರು

































































Discussion about this post