ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಕಳೆಯನ್ನು ಹೆಚ್ಚಿಸುವ, ಜಿಲ್ಲೆಯಲ್ಲಿ ಹೊಸ ಅಧ್ಯಾಯವನ್ನು ಸೃಷ್ಠಿಸಲಿರುವ ಭಾರತೀಯ ವಾಯುಪಡೆಯ ನಿವೃತ್ತಿಗೊಂಡ ಯುದ್ಧ ವಿಮಾನ #FighterJet ಶೀಘ್ರ ನಗರಕ್ಕೆ ಆಗಮಿಸಲಿದೆ.
ಈ ಕುರಿತಂತೆ ಸಂಸದ ಬಿ.ವೈ. ರಾಘವೇಂದ್ರ #BYRaghavendra ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಶಿವಮೊಗ್ಗಕ್ಕೆ ಹೆಮ್ಮೆಯ ದಿನ! ಭಾರತೀಯ ವಾಯುಪಡೆಯ ಪೈಲಟ್’ಗಳ ವಿಶ್ವಾಸಾರ್ಹ ತರಬೇತುದಾರರಾಗಿದ್ದ, ನಿವೃತ್ತಿಗೊಂಡ HAL HJT-16 ಕಿರಣ್ ವಿಮಾನವನ್ನು ಗೌರವಾನ್ವಿತ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ #RajnathSingh ಅವರು ಮಂಜೂರು ಮಾಡಿದ್ದಾರೆ ಎಂದು ಹಂಚಿಕೊಳ್ಳಲು ಸಂತೋಷವಾಯಿತು. ಇದು ಶಿವಮೊಗ್ಗಕ್ಕೆ #Shivamogga ಹೊಸ ಅಧ್ಯಾಯವನ್ನು ಸೂಚಿಸುತ್ತದೆ ಎಂದಿದ್ದಾರೆ.

ಈ ವಿಮಾನವು ನಮ್ಮ ರಕ್ಷಣಾ ಪರಂಪರೆಯನ್ನು ಗೌರವಿಸುವುದಲ್ಲದೆ, ನಮ್ಮ ಸ್ಮಾರ್ಟ್ ಸಿಟಿಯ – ಸಾಂಸ್ಕೃತಿಕ ರಾಜಧಾನಿ ಮತ್ತು ಮಲೆನಾಡಿನ ದ್ವಾರದ ಹೆಮ್ಮೆಯನ್ನು ಹೆಚ್ಚಿಸುತ್ತದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post