ಇಸ್ಲಾಮಾಬಾದ್: ಭಾರತೀಯ ಸಂಜಾತೆಯಾದರೂ ಪಾಕ್ ಕ್ರಿಕೆಟರನ್ನು ಮೆಚ್ಚಿ ವಿವಾಹವಾಗಿ, ಅಲ್ಲಿನ ಸೊಸೆಯಾದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ಪುಲ್ವಾಮಾ ಉಗ್ರನ ದಾಳಿಯಲ್ಲಿ ವೀರಸ್ವರ್ಗ ಸೇರಿದ ಭಾರತೀಯ ಯೋಧರ ಕುರಿತಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಸಾನಿಯಾ ಮಿರ್ಜಾ, ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್’ಪಿಎಫ್ ಯೋಧರು ನಿಜವಾದ ಹೀರೋಗಳು ಎಂದು ಕೊಂಡಾಡಿದ್ದಾರೆ.
ಭಯೋತ್ಪಾದಕ ದಾಳಿಯನ್ನು ಖಂಡಿಸಲು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಬೇಕು ಎಂಬುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ದುರಂತದ ಮೇಲೆ ಪೋಸ್ಟ್’ಗಳ ಸಂಖ್ಯೆಯನ್ನು ನಿರ್ಣಯಿಸಬಾರದು ಎಂದಿದ್ದಾರೆ.
We stand united 🕯 #PulwamaAttack pic.twitter.com/Cmeij5X1On
— Sania Mirza (@MirzaSania) February 17, 2019
ನಾನು ಸಿಆರ್’ಪಿಎಫ್ ಜಾವಾನರ ಮತ್ತು ಅವರ ಕುಟುಂಬಗಳೊಂದಿಗೆ ನಿಲ್ಲುತ್ತೇನೆ. ನಮ್ಮ ದೇಶವನ್ನು ರಕ್ಷಿಸುತ್ತಿರುವ ಈ ನಿಜವಾದ ಹೀರೋಗಳನ್ನು ನಾನು ಹೃದಯದಿಂದ ನೆನೆಯುತ್ತೇನೆ. ಇವರೇ ನಮ್ಮ ನಾಯಕರು. ಫೆಬ್ರುವರಿ 14 ಭಾರತಕ್ಕೆ ಕರಾಳ ದಿನವಾಗಿತ್ತು ಮತ್ತು ನಾವು ಈ ರೀತಿಯ ಮತ್ತೊಂದು ದಿನ ನಮಗೆ ಎದುರಾಗಬಾರದು. ಇದು ಅಷ್ಟು ಸುಲಭವಾಗಿ ಮರೆಯುವುದೂ ಅಲ್ಲ ಹಾಗೂ ಕ್ಷಮಿಸುವುದೂ ಅಲ್ಲ. ಆದರೆ ನಾನು ಇನ್ನೂ ಶಾಂತಿಗಾಗಿ ಪ್ರಾರ್ಥನೆ ಮಾಡುತ್ತೇನೆ. ನೀವು ಹೆಚ್ಚು ದ್ವೇಷವನ್ನು ಹರಡುವ ಬದಲು, ಒಳ್ಳೆಯದನ್ನು ಹರಡಬೇಕು. ಈ ಜಗತ್ತಿನಲ್ಲಿ ಭಯೋತ್ಪಾದನೆಗೆ ಯಾವುದೇ ಸ್ಥಳವಿಲ್ಲ ಎಂದಿದ್ದಾರೆ.
Discussion about this post